ಬದಿಯಡ್ಕ : ಕಾಸರಗೋಡು, ಕೇರಳ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಸಂದರ್ಶನದ ಹಿನ್ನಲೆಯಲ್ಲಿ "ತುಳುನಾಡ್ ಉದ್ಯೋಗ ಮೇಳ" ಡಿ.20 ಕ್ಕೆ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ರ ತನಕ ಬದಿಯಡ್ಕದ ಎಲೈಟ್ ಅಕಾಡೆಮಿ ಸಭಾಂಗಣದಲ್ಲಿ ಜರಗಲಿದೆ. ಎಲೈಟ್ ಅಕಾಡೆಮಿ ಬದಿಯಡ್ಕ ಮತ್ತು ಮಾತೃಶ್ರೀ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳದಲ್ಲಿ 10 ಕ್ಕೂ ಅಧಿಕ ಕಂಪೆನಿಗಳು ಸಂದರ್ಶನ ನಡೆಸುತ್ತಿದ್ದು ಸ್ಥಳೀಯವಾಗಿ ಉದ್ಯೋಗ ಸಾಧ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಎಸ್ ಎಸ್ ಎಲ್ ಸಿ , ಪ್ಲಸ್ ಟು ಹಾಗೂ ಪದವಿಧರರು ಈ ಕೆಳಗಿನ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
https://forms.gle/fhMAUZPsa8SFYYCU9
ಹೆಚ್ಚಿನ ವಿವರಗಳಿಗೆ: 8606338429/8885338429 ಸಂಪರ್ಕಿಸಲು ಕೋರಲಾಗಿದೆ.

0 Comments