ಕಾಸರಗೋಡು : ಬೆಂಕಿ ಅವಘಡದಿಂದ ಮನೆ ಉರಿದು ತೀರ ನಾಶನಷ್ಟಕ್ಕೆ ಒಳಗಾದ ಕಾಸರಗೋಡು ಕೊಳಕೆಬೈಲ್ ನಿವಾಸಿ ಪುಷ್ಪ ಗಣಪತಿ ಆಚಾರ್ಯ ಅವರ ಮನೆಗೆ ಮಂಜೇಶ್ವರದ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ಉದ್ಯಾವರ ಮಾಡ ಇದರ ಪದಾಧಿಕಾರಿಗಳು ಬೇಟಿ ನೀಡಿ ಸಾಂತ್ವನ ನುಡಿದರು.
ಈ ಸಂದರ್ಭದಲ್ಲಿ ಮನೆಗೆ ದಿನಸಿ ಸಾಮಾಗ್ರಿಗಳ ಸಹಿತ ಬಟ್ಟೆ, ಮಕ್ಕಳ ಕಲಿಕೆಗೆ ಬೇಕಾದ ಪುಸ್ತಕ ಇವುಗಳನ್ನು ನೀಡಲಾಯಿತು.ಸ್ಥಳೀಯ ಶಾಸಕ ಎನ್.ಎ.ನೆಲ್ಲಿಕುನ್ನು ಈ ಸಂದರ್ಭ ಭೇಟಿ ನೀಡಿ ಸ್ಥಿತಿಗತಿ ಅವಲೋಕಿಸಿದರು.
ಟ್ರಸ್ಟ್ ನ ಮುಖ್ಯಸ್ಥರಾದ ರಾಜ ಬೆಳ್ಚಪ್ಪಾಡ, ಹರೀಶ್ ಮೇಘ ಕ್ಯಾಟರರ್ಸ್, ನಳಿನಾಕ್ಷ ಆಚಾರ್ಯ,ಜಯರಾಜ್ ಶೆಟ್ಟಿ ಕುಳೂರು, ತುಳಸಿದಾಸ್ ಮಂಜೇಶ್ವರ,ಅನುಷ್ ಕುಮಾರ್ ದೇರಂಬಳ,ಕಿಶೋರ್ ಸುವರ್ಣ ಕಾಸರಗೋಡು,ಸುಪ್ರೀತ ಅನುಷ್ ದೇರಂಬಳ,ವಾರ್ಡು ಕೌನ್ಸಿಲರ್ ಹರೀಶ್ ಕೆ.ಆರ್ ಮುಂತಾದವರು ಇದ್ದರು.

0 Comments