Ticker

6/recent/ticker-posts

Ad Code

ಮತ ಯಂತ್ರಗಳಲ್ಲಿ ಅಭ್ಯರ್ಥಿಗಳ ಫೋಟೋ ಅವ್ಯಕ್ತತೆ ದೂರು

 

ಪತ್ತನಂತಿಟ್ಟ : ಇಂದು ರಾಜ್ಯದಲ್ಲಿ  ವಿಧಾನಸಭಾ ಚುನಾವಣೆ ನಡೆಯುತ್ತಿದ್ದು,  ಮತ ಯಂತ್ರಗಳಲ್ಲಿನ ಅಭ್ಯರ್ಥಿಗಳ ಫೋಟೋಗಳ ಬಗ್ಗೆ ದೂರು ದಾಖಲಾಗಿದೆ. ಮಲ್ಲಪ್ಪುಝಶ್ಶೇರಿ ಮತಗಟ್ಟೆಯಲ್ಲಿನ ಮತ ಯಂತ್ರದಲ್ಲಿ ವೀಣಾ ಜಾರ್ಜ್ ಫೋಟೋ ಮಾತ್ರ ಸ್ಪಷ್ಟವಾಗಿದ್ದು, ಇತರ ಅಭ್ಯರ್ಥಿಗಳ ಫೋಟೋಗಳು ಸ್ಪಷ್ಟವಾಗಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾಧಿಕಾರಿಗೆ ದೂರು ನೀಡಿದೆ. 

ದೂರನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್. ಪ್ರೇಮ್ ಕೃಷ್ಣನ್ ತಿಳಿಸಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಅರನ್ಮುಲ ಕ್ಷೇತ್ರದಲ್ಲಿ, ಮತದಾನ ಪ್ರಾರಂಭವಾದ ಎರಡೂವರೆ ಗಂಟೆಗಳಲ್ಲಿ ಶೇ. 17.33 ರಷ್ಟು ಮತದಾನ ದಾಖಲಾಗಿದೆ.

Post a Comment

0 Comments