Ticker

6/recent/ticker-posts

Ad Code

ಮಂಗಳೂರು ಸೆಂಟ್ರಲ್ ನಿಂದ ಚೆನ್ನೈ ಎಗ್ಮೋರ್ ವಿಶೇಷ ರೈಲು ಸಂಚಾರ : ಕಾಸರಗೋಡು ಮತ್ತು ಕಾಞಂಗಾಡ್ ನಲ್ಲಿ ನಿಲುಗಡೆ ಲಭ್ಯ

 

ಕಾಸರಗೋಡು :  ವಿಷು ರಜಾದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ, ರೈಲ್ವೆ ಇಲಾಖೆಯು ಮಂಗಳೂರು ಸೆಂಟ್ರಲ್ ನಿಂದ ಚೆನ್ನೈ ಎಗ್ಮೋರ್ ಗೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಪ್ರಸ್ತುತ, ಏಪ್ರಿಲ್ ತಿಂಗಳಲ್ಲಿ ಹಬ್ಬದ ಜನದಟ್ಟಣೆಯನ್ನು ಕಡಿಮೆ ಮಾಡಲು ಪ್ರತಿ ದಿಕ್ಕಿನಲ್ಲಿ ಎರಡು ಸೇವೆಗಳನ್ನು ಅನುಮತಿಸಲಾಗಿದೆ. ಈ ಕುರಿತು ಪಾಲಕ್ಕಾಡ್ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ. ದೇವದಾನಂ ಅವರು ಅಧಿಸೂಚನೆ ಹೊರಡಿಸಿದ್ದಾರೆ. 

ರೈಲು ಸಂಖ್ಯೆ 06126 ಮಂಗಳೂರು ಸೆಂಟ್ರಲ್ - ಚೆನ್ನೈ ಎಗ್ಮೋರ್ ಉತ್ಸವ ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 6 ಮತ್ತು 13 ರಂದು (ಸೋಮವಾರ) ಸಂಜೆ 4 ಗಂಟೆಗೆ ಮಂಗಳೂರು ಸೆಂಟ್ರಲ್ ನಿಂದ ಹೊರಡುತ್ತದೆ. ಈ ರೈಲು ಮರುದಿನ ಬೆಳಿಗ್ಗೆ 10.30 ಕ್ಕೆ ಚೆನ್ನೈ ಎಗ್ಮೋರ್ ತಲುಪಲಿದೆ. ಹಿಂದಿರುಗುವ ಪ್ರಯಾಣಕ್ಕಾಗಿ, ರೈಲು ಸಂಖ್ಯೆ 06125 ಚೆನ್ನೈ ಎಗ್ಮೋರ್ - ಮಂಗಳೂರು ಸೆಂಟ್ರಲ್ ಫೆಸ್ಟಿವಲ್ ಸ್ಪೆಷಲ್ ಎಕ್ಸ್‌ಪ್ರೆಸ್ ಏಪ್ರಿಲ್ 7 ಮತ್ತು 14 ರಂದು (ಮಂಗಳವಾರ) ಮಧ್ಯಾಹ್ನ 2 ಗಂಟೆಗೆ ಚೆನ್ನೈ ಎಗ್ಮೋರ್‌ನಿಂದ ಹೊರಡುತ್ತದೆ. ರೈಲು ಮರುದಿನ ಬೆಳಿಗ್ಗೆ 6.50 ಕ್ಕೆ ಮಂಗಳೂರು ಸೆಂಟ್ರಲ್‌ಗೆ ಆಗಮಿಸುತ್ತದೆ. ಕೇರಳದ ಪ್ರಮುಖ ನಿಲ್ದಾಣಗಳಲ್ಲಿ ಮಂಗಳೂರಿನಿಂದ ಹೊರಡುವ ರೈಲಿನ ಸಮಯ - ಕಾಸರಗೋಡು: 16.52 ಕಾಞಂಗಾಡ್: 17.10 ಪಯ್ಯನ್ನೂರು: 17.33 ಕಣ್ಣೂರು: 18.07 ತಲಶ್ಶೇರಿ: 18.30 ವಡಕರ: 18.49 ಕೋಝಿಕ್ಕೋಡ್: 19.32 ತಿರೂರ್: 20.11 ಶೋರನೂರು ಜಂಕ್ಷನ್: 21.30 ಪಾಲಕ್ಕಾಡ್ ಜಂಕ್ಷನ್: 22.57. ಪಾಲಕ್ಕಾಡ್ ನಂತರ,  ಪೊದನೂರ್, ತಿರುಪ್ಪೂರ್, ಈರೋಡ್, ಸೇಲಂ, ಜೋಲಾರ್ಪೆಟ್ಟಾ, ಕಟ್ಪಾಡಿ, ಶೋಲಿಂಗರ್, ಅರಕ್ಕೋಣಂ, ತಿರುವಳ್ಳೂರ್ ಮತ್ತು ಪೆರಂಬೂರ್  ದಾರಿಯಾಗಿ  ಚೆನ್ನೈ ಎಗ್ಮೋರ್ ಗೆ ತಲುಪುತ್ತದೆ.

Post a Comment

0 Comments