Ticker

6/recent/ticker-posts

Ad Code

ನಾಳೆ ಪೆರ್ಲಕ್ಕೆ ಬಿಜೆಪಿಯ ಜನಪ್ರಿಯ ನಾಯಕ ಕೆ. ಅಣ್ಣಾಮಲೈ ಆಗಮನ

 

ಪೆರ್ಲ : ವಿಧಾನ ಸಭಾ ಕ್ಷೇತ್ರದ ಚುನಾವಣೆಯಗೆ ಅಂತಿಮ ದಿನಗಳು ತಲುಪುತ್ತಿದ್ದಂತೆ ವೈವಿಧ್ಯಮಯ ಬಹಿರಂಗ  ಪ್ರಚಾರಕ್ಕೆ ನಾಳೆ ತೆರೆ ಬೀಳಲಿದೆ. ಎನ್ ಡಿಎ ಅಭ್ಯರ್ಥಿ ಕೆ ಸುರೇಂದ್ರನ್ ಮತ ಪರ್ಯಟನೆಯ ಆರಂಭದಿಂದಲೂ ಮಂಜೇಶ್ವರ ಮಂಡಲದಲ್ಲಿ ಹೊಸ ಹುರುಪು, ಆವೇಶವನ್ನು ಸೃಷ್ಟಿಸಿಕೊಂಡು ಮುನ್ನಡೆಯುತ್ತಿದ್ದು ಜನ ಬೆಂಬಲ ಅಪಾರ ಪ್ರಮಾಣದಲ್ಲಿ ವ್ಯಕ್ತವಾಗುತ್ತಿದೆ. 

ಬಹಿರಂಗ ಪ್ರಚಾರದ ಅಂತಿಮ ದಿನವಾದ ನಾಳೆ (ಏ.7) ಬೆಳಗ್ಗೆ 10 ಗಂಟೆಗೆ ಪೆರ್ಲ ಪೇಟೆಯಲ್ಲಿ ಕೆ.ಸುರೇಂದ್ರನ್ ಪರ ಬೃಹತ್ ರೋಡ್ ಶೋ ಆಯೋಜಿಸಲಾಗಿದೆ. ಬಿಜೆಪಿ ಜನಪ್ರಿಯ ನಾಯಕ ಕೆ ಅಣ್ಣಾಮಲೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಭಾಜಪ ಹಾಗೂ ಸಹ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments