ಮಂಜೇಶ್ವರ : ಮಂಜೇಶ್ವರದ ರೈಲು ಹಳಿಗಳಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ರೈಲು ಡಿಕ್ಕಿಯಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸಂಜೆ ಸುಮಾರು ಏಳು ಗಂಟೆ ವೇಳೆಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಮೊದಲ ಮೃತದೇಹ ಪತ್ತೆಯಾಯಿತು. ಮಂಜೇಶ್ವರ ನಿವಾಸಿ ಉಮೇಶ್ (39) ಎಂದು ಗುರುತಿಸಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ರಾತ್ರಿ 9ರ ವೇಳೆಗೆ ರೈಲ್ವೇ ಟ್ರಾಕಿನಲ್ಲಿ ಇನ್ನೊಂದು ಮೃತದೇಹ ಪತ್ತೆಯಾಯಿತು. ಇದು ಕೀರ್ತೇಶ್ವರದ ನಿವಾಸಿ ಮನೀಶ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆ ಸಂಬಂಧ ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

0 Comments