Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಶ್ರೀ ಅನಂತಪುರ ಕ್ಷೇತ್ರ ರಕ್ಷಾ ಸಮಿತಿಯಿಂದ ಎಡನೀರು ಶ್ರೀಗಳ ಭೇಟಿ : ಕಾರ್ಯಕ್ರಮದ ರೂಪುರೇಷೆ ಮಾರ್ಗದರ್ಶನ

 

ಕುಂಬಳೆ : ಅನಂತಪುರ ಕ್ಷೇತ್ರ ಪರಿಸದದಲ್ಲಿ ದುರ್ಗಂಧ ಬೀರುವ ಮತ್ತು ಮಲಿನ ಜಲ ಹೊರಬಿಡುವ ಕಾರ್ಖಾನೆಗಳ ವಿರುದ್ಧ ಅನಂತಪುರ ಕ್ಷೇತ್ರ ಸಂರಕ್ಷಣೆಗಾಗಿ ಜುಲೈ 6 2026 ಸೋಮವಾರ ಬೆಳೆಗ್ಗೆ 9 ಗಂಟೆಗೆ ಕ್ಷೇತ್ರ ರಕ್ಷಾ ಮಾರ್ಚ್ ಆಯೋಜಿಸಲಾಗಿದೆ. ಮಧೂರು ಕ್ಷೇತ್ರ ಮೂಲಸ್ಥಾನ ಉಳಿಯತ್ತಡ್ಕದಿಂದ ವಿದ್ಯಾನಗರ ಜಿಲ್ಲಾ ಕೈಗಾರಿಕಾ ಕೇಂದ್ರದವರೆಗೆ ನಡೆಯುವ ಅನಂತಪುರ ಕ್ಷೇತ್ರ ರಕ್ಷಾ ಮಾರ್ಚ್ ನಲ್ಲಿ ಹಿಂದೂಪರ ಕ್ಷೇತ್ರ, ಭಜನಾ ಮಂದಿರ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರ ಪ್ರಮುಖರ ಜತೆ ಭಕ್ತ ಜನ ಮೆರವಣಿಗೆ ಹರಿದು ಬರಲಿದೆ. ಈ ಬಗ್ಗೆ ಅನಂತಪುರ ಕ್ಷೇತ್ರದ ರಕ್ಷಾ ಸಮಿತಿಯ ಪದಾಧಿಕಾರಿಗಳು  ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರನ್ನು ಎಡನೀರು ಮಠದಲ್ಲಿ ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ಮಾರ್ಗದರ್ಶನ ಪಡೆದರು. ಈ ಸಂದರ್ಭದಲ್ಲಿ ಉದುಮ ಶಾಸಕರಾದ  ನೀಲಕಂಠನ್, ಕುಂಟಾರು ರವೀಶ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments


ಜಾಹೀರಾತು

Responsive Advertisement