Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೇರಳ ಸರಕಾರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ನೊಂದಿಗೆ ಅಧ್ಯಾಪಕ ಹುದ್ದೆಗೆ ಆಯ್ಕೆ

ಪೆರ್ಮುದೆ : ಕೇರಳ ಸರಕಾರ ಲೋಕ ಸೇವಾ ಆಯೋಗ ನಡೆಸಿದ ಅಧ್ಯಾಪಕ ಹುದ್ದೆಯ ಪರೀಕ್ಷೆಯಲ್ಲಿ  ಚೇವಾರು ಬಾಯಾಡಿಯ ಶಶಿಪ್ರಭಾ ಎಂ ದ್ವಿತೀಯ ರ‍್ಯಾಂಕ್ ನೊಂದಿಗೆ ತೇರ್ಗಡೆಗೊಂಡು ಜಿ ಎಚ್ ಎಸ್ ಎಸ್ ಶಿರಿಯ ಶಾಲೆಗೆ ನೇಮಕಗೊಂಡಿದ್ದಾರೆ. ಮಂಡೆಕಾಪು ಕೊರಗಪ್ಪ ಕುಲಾಲ್ - ಗೋಪಿ ದಂಪತಿಗಳ ಪುತ್ರಿಯಾದ ಈಕೆ ಕಯ್ಯಾರ್ ಡಾನ್ ಬೋಸ್ಕೊ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಬಳಿಕ ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ  ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ, ಪೈವಳಿಕೆ ನಗರದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಟು, ಪೆರ್ಲ ನಲಂದ ಕಾಲೇಜಿನಲ್ಲಿ ಪದವಿ, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ, ಚಾಲ ಬಿಎಡ್ ಕೇಂದ್ರದಿಂದ ಶಿಕ್ಷಣ ಪದವಿ(ಬಿಎಡ್) ವಿದ್ಯಾಭ್ಯಾಸ ಗಳಿಸಿಕೊಂಡಿದ್ದಾರೆ. ಇವರು  ಗಣೇಶ್ ಬಾಯಾಡಿಯವರ ಧರ್ಮಪತ್ನಿಯಾಗಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement