Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಖಾಸಗಿ ಬಸ್ ಗಳ ಸ್ಪರ್ಧಾತ್ಮಕ ಓಟ : ಬಸವಳಿದ ಪ್ರಯಾಣಿಕರು : ಸೂಕ್ತ ಕ್ರಮಕ್ಕೆ ಆಗ್ರಹ


ನೀರ್ಚಾಲ್  : ಕಾಸರಗೋಡು-ಮುಂಡಿತ್ತಡ್ಕ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಎರಡು ಖಾಸಗಿ ಬಸ್ಸುಗಳು ಸ್ಪರ್ಧಾತ್ಮಕ ಓಟ ನಡೆಸಿದ್ದು ಇವುಗಳ ವಿರುದ್ಧ ಆರ್ ಟಿಒ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ನಿನ್ನೆ (ಗುರುವಾರ) ಸಂಜೆ ಎರಡು ಖಾಸಗಿ  ಬಸ್‌ಗಳು  ಕಾಸರಗೋಡಿನ ಹೊಸ ಬಸ್ ನಿಲ್ದಾಣದಿಂದ ಸ್ಪರ್ಧಾತ್ಮಕ ರೀತಿಯಲ್ಲಿ ಓಡಾಟ ನಡೆಸಿದ್ದು ಇದರಿಂದಾಗಿ ಮಕ್ಕಳು, ಮಹಿಳೆಯರ ಸಹಿತ ಪ್ರಯಾಣಿಕರನ್ನು ಭಯಬೀತರಾಗಿಸಿದ ಪ್ರಕರಣ ನಡೆದಿತ್ತು. ಈ ರಸ್ತೆಯಲ್ಲಿ ಗುಂಡಿಗಳು ಮತ್ತು ತಿರುವುಗಳಿರುವ ಕಾರಣ  ಬಸ್ ರೇಸ್ ನಡೆಸುವ ವೇಳೆ ಅದರಲ್ಲಿದ್ದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಚಾಲಕ ಗಮನ ತಪ್ಪಿದರೆ, ಅಪಘಾತ ಖಚಿತವಾಗಿತ್ತು. ಒಂದೇ ಮಾರ್ಗದಲ್ಲಿ ಸಂಚರಿಸುವ ಕೆಲವು ಬಸ್‌ಗಳು ತಡವಾಗಿ ಸಂಚರಿಸುತ್ತಿದ್ದು, ತಮ್ಮ ಸೇವೆಯನ್ನು ಅರ್ಧಕ್ಕೆ ನಿಲ್ಲಿಸುತ್ತಿವೆ ಎಂಬ ದೂರುಗಳೂ ಇವೆ. ಅದೇ ಮಾರ್ಗದಲ್ಲಿ ಪರವಾನಗಿ ಇಲ್ಲದ, ಸಮವಸ್ತ್ರ ಧರಿಸದ, ಬಸ್‌ನಲ್ಲಿರುವ ಪ್ರಯಾಣಿಕರಿಗೆ ಟಿಕೆಟ್ ನೀಡದ ಕಂಡಕ್ಟರ್‌ಗಳೂ ಇದ್ದಾರೆ. ಸ್ಪರ್ಧಾತ್ಮಕ ಓಟದಲ್ಲಿ ತೊಡಗಿರುವ ಬಸ್ ಮಾಲೀಕರು ಮತ್ತು ನೌಕರರ ವಿರುದ್ಧ ಮೋಟಾರ್ ವಾಹನ ಇಲಾಖೆ ಕ್ರಮ ಕೈಗೊಳ್ಳಲು ಸಿದ್ಧವಾಗಬೇಕೆಂದು ಸ್ಥಳೀಯರು ಮತ್ತು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement