ಬೆಂಗಳೂರು : ದ್ರಾವಿಡ ಭಾಷಾ ಟ್ರಾನ್ಸ್‌ಲೇಟರ್ಸ್ ಅಸೋಸಿಯೇಶನ್ (DBTA) ವತಿಯಿಂದ ನೀಡಲಾಗುವ 2026ನೇ ಸಾಲಿನ ಅನುವಾದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ್ದು, ಜುಲೈ 15 ಕೊನೆಯ ದಿನವಾಗಿದೆ.
ದ್ರಾವಿಡ ಭಾಷೆಗಳಾದ ಮಲಯಾಳಂ, ಕನ್ನಡ, ತಮಿಳು ಹಾಗೂ ತುಳು ಭಾಷೆಗಳಿಂದ ತೆಲುಗು ಭಾಷೆಗೆ ಅನುವಾದಗೊಂಡ ಕಾದಂಬರಿಗಳಿಗೆ ಈ ವರ್ಷದ ಪ್ರಶಸ್ತಿ ನೀಡಲಾಗುವುದು. 2024 ಮತ್ತು 2025ರಲ್ಲಿ ಪ್ರಕಟವಾದ ಅನುವಾದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ತಮ್ಮ ಅನುವಾದಿತ ಕೃತಿಯ ಮೂರು ಪ್ರತಿಗಳನ್ನು ಜುಲೈ 15ರೊಳಗೆ ಅಧ್ಯಕ್ಷರು, DBTA, ಶ್ರೀ ಭೈರವೇಶ್ವರ ನಿಲಯ, ಇಮ್ಮಡಿಹಳ್ಳಿ ಮುಖ್ಯ ರಸ್ತೆ, ಹಗದೂರು, ವೈಟ್‌ಫೀಲ್ಡ್, ಬೆಂಗಳೂರು – 560066 ಈ ವಿಳಾಸಕ್ಕೆ ಕಳುಹಿಸಬೇಕು.
ಪ್ರಶಸ್ತಿಯು ₹11,111 ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವ ಸಂಘದ ಐದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024ರಲ್ಲಿ ತಮಿಳು ಅನುವಾದಕ್ಕೆ ಹಾಗೂ 2025ರಲ್ಲಿ ಕನ್ನಡ ಅನುವಾದಕ್ಕೆ ಡಿ.ಬಿ.ಟಿ.ಎ ಅನುವಾದ ಪ್ರಶಸ್ತಿ ನೀಡಲಾಗಿತ್ತು. 2027ರ ಪ್ರಶಸ್ತಿಯನ್ನು ಮಲಯಾಳಂ ಅನುವಾದಕ್ಕೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9901041889, 8147212724 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

0 Comments