Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮುಳ್ಳೇರಿಯದಲ್ಲಿ ಅಪಘಾತಕ್ಕೀಡಾದ ಪಿಕಪ್ ವ್ಯಾನ್ ಚಾಲಕನ ವಿರುದ್ಧ ಕೇಸು ದಾಖಲು


ಮುಳ್ಳೇರಿಯ : ಬೋವಿಕ್ಕಾನ ಇರಿಯಣ್ಣಿ ರಸ್ತೆಯಲ್ಲಿರುವ ಅರಣ್ಯ ಕಚೇರಿ ಬಳಿ ಪಿಕಪ್ ವ್ಯಾನ್ ಅಪಘಾತಕ್ಕೀಡಾದ ಘಟನೆಯಲ್ಲಿ ಪಿಕಪ್ ವ್ಯಾನ್ ಚಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಮಂಗಳೂರು ಮೂಡಬಿದ್ರಿ ನಿವಾಸಿ ಸಿದ್ದಿಕ್ (36) ವಿರುದ್ಧ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.  

ಅಪಘಾತಕ್ಕೀಡಾದ ವ್ಯಾನ್ ಅನ್ನು ಚಾಲಕ ಮತ್ತು ಅವರ ಸಹಾಯಕ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾಗ, ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಇನ್ಸ್‌ಪೆಕ್ಟರ್ ಆರ್. ಬಿಜು ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಚಾಲಕನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಚಾಲಕ ಕುಡಿದಿರುವುದು ಬೆಳಕಿಗೆ ಬಂದಿತ್ತು. ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement