ಪೆರ್ಲ: ಉಕ್ಕಿನಡ್ಕದ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ನಾನಾ ವಿಭಾಗಗಳಲ್ಲಿ ಖಾಲಿ ಇರುವ ಜೂನಿಯರ್ ರೆಸಿಡೆಂಟ್ ಹುದ್ದೆಗಳ ನೇಮಕಾತಿಗೆ ಜೂ. 23ರಂದು ಬೆಳಗ್ಗೆ 11ಕ್ಕೆ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಎಂಬಿಬಿಎಸ್ ಮತ್ತು ಟಿಸಿಎಂಸಿ ನೋಂದಣಿ ಹೊಂದಿರುವ ಅಭ್ಯರ್ಥಿಗಳನ್ನು ಗರಿಷ್ಠ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ಅರ್ಹತೆ ಮತ್ತು ಕೆಲಸದ ಅನುಭವವನ್ನು ಸಾಬೀತುಪಡಿಸಲು ಅಗತ್ಯ ಪ್ರಮಾಣಪತ್ರಗಳೊಂದಿಗೆ ಹಾಜರಿರಬೇಕು. ಹೆಚ್ಚು ಅರ್ಹತೆ ಮತ್ತು ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ತಿಳಿಸಿದ್ದಾರೆ.

0 Comments