Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲ ಪೇಟೆಯ ಅಂಗಡಿ ಮುಂಭಾಗ ದಾಂಧಲೆ : ಇಬ್ಬರ ಜಾಮೀನು ಅರ್ಜಿ ವಜಾ


ಬದಿಯಡ್ಕ : ಪೆರ್ಲ ಪೇಟೆಯ ಅಂಗಡಿಯೊಂದರೊಳಗೆ ಕಬ್ಬಿಣದ ರಾಡ್ ಹಿಡಿದು ನುಗ್ಗಿದ ದುಷ್ಕರ್ಮಿಗಳು ಅಂಗಡಿ ಮಾಲಕನಿಗೆ ಹಲ್ಲೆಗೊಳಿಸಿ ತಡೆಯಲು ಬಂದ ಆತನ‌ ಸ್ನೇಹಿತನನ್ನು ಹೊಡೆದು ಗಾಯಗೊಳಿಸಿದ ಬಗ್ಗೆ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಮೇ19ರಂದು ಪೆರ್ಲ ಪೇಟೆಯಲ್ಲಿ ನಡೆದ ದಾಂಧಲೆ ಪ್ರಕರಣವೊಂದರಲ್ಲಿ ಗಣೇಶ್ ಪ್ರಭು ಹಾಗೂ ವಾಣಿನಗರದ ಅವಿನಾಶ್ ಅವರ ವಿರುದ್ಧ ಬದಿಯಡ್ಕ ಪೋಲಿಸರು ಕೇಸು ದಾಖಲಿಸಿದ್ದರು. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ನಿವಾಸಿ ಕೆ.ಎಂ. ಮುಹಮ್ಮದ್ ಅಶ್ರಫ್ (45) ಅವರ ಮೇಲೆ ಹಲ್ಲೆ ನಡೆಸಲಾಗಿತ್ತು ಎನ್ನಲಾಗಿದ್ದು ಪ್ರಕರಣವನ್ನು ಕೈಗೆತ್ತಿಕೊಂಡ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯವು ಇಬ್ಬರ ಜಾಮೀನು ಅರ್ಜಿಗಳನ್ನು ನಿರಾಕರಿಸಿದೆ. ಪ್ರಕರಣದಲ್ಲಿ ಮುಹಮ್ಮದ್ ಅಶ್ರಫ್ ಮತ್ತು ಆತನ‌ ಸ್ನೇಹಿತ ಚೆಂಗಳ ಇ.ಕೆ.ನಾಯನಾರ್ ಸಹಕಾರಿ ಆಸ್ಪತ್ರೆಯಲ್ಲೂ, ಗಣೇಶ್ ಪ್ರಭು ಹಾಗೂ ಅವಿನಾಶ್ ಪುತ್ತೂರು ಆಸ್ಪತ್ರೆಯಲ್ಲೂ ದಾಖಲಾಗಿದ್ದರು.

Post a Comment

0 Comments


ಜಾಹೀರಾತು

Responsive Advertisement