Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡು-ಮಂಗಳೂರು,ಸುಳ್ಯ, ಪುತ್ತೂರು ಅಂತರಾಜ್ಯ ರೂಟಿನ ಕೇರಳ ಕೆಎಸ್ಸಾರ್ಟೀಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ


ಕಾಸರಗೋಡು : ಯುಡಿಎಫ್ ನ  ಚುನಾವಣಾ ಭರವಸೆಯಾದ ಕೆಎಸ್ಸಾರ್ಟೀಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ ಪ್ರಿಯದರ್ಶಿನಿ’ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆ ಕೂಡಾ ಸೌಲಭ್ಯಕ್ಕೆ ಅರ್ಹವಾಗಿದೆ. ಜಿಲ್ಲೆಯ 75 ಬಸ್ ಸರ್ವೀಸ್ ಗಳಲ್ಲಿ ಜೂನ್ 15 ರಂದು ಬೆಳಿಗ್ಗೆ 9 ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ.

ಇದರಂತೆ ಕಾಸರಗೋಡು-ಮಂಗಳೂರು, ಕಾಸರಗೋಡು- ಸುಳ್ಯ, ಕಾಸರಗೋಡು- ಪುತ್ತೂರು ಅಂತರಾಜ್ಯ ರೂಟಿನ ಕೇರಳ ಕೆಎಸ್ಸಾರ್ಟೀಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ.

ಯೋಜನೆಯನ್ನು ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಉದ್ಘಾಟಿಸುವರು. ಕಾಸರಗೋಡಿನಲ್ಲಿ ಬೆಳಿಗ್ಗೆ 9 ಕ್ಕೆ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಹಾಗೂ ಉಪ್ಪಳದಲ್ಲಿ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಚಾರಿತ್ರಿಕವಾದ ಈ ಕ್ಷಣವನ್ನು ಸಂಭ್ರಮಿಸಲು ಯುಡಿಎಫ್ ಸಜ್ಜಾಗಿದೆ.

 ಕಾಸರಗೋಡಿನ ಟೌನ್ ಟು ಟೌನ್, ಲಿಮಿಟೆಡ್, ಆರ್ಡಿನರಿ ಬಸ್ ಗಳಿಗೆ ಪ್ರಿಯದರ್ಶಿನಿ ಯೋಜನೆ ವಿಸ್ತರಿಸಲ್ಪಟ್ಟ ಕಾರಣ ಈ ಸೌಲಭ್ಯ ಉಂಟಾಗಿದೆ.ಕಾಸರಗೋಡು – ಮಂಗಳೂರು ರೂಟಿನಲ್ಲಿ ಬೆಳಿಗ್ಗೆ 4 ರಿಂದ ಒಟ್ಟು 139 ಬಾರಿ ಕೇರಳ. ಕೆಎಸ್ಸಾರ್ಟೀಸಿ ಬಸ್ ಸಂಚಾರ ನಡೆಸುತ್ತಿದೆ. ಮಂಗಳೂರು, ಪುತ್ತೂರು, ಸುಳ್ಯ ಕಡೆಗೆ ಅಂತರಾಜ್ಯ ಪ್ರಯಾಣ ದೖನಂದಿನ ನಡೆಸುವ ವಿದ್ಯಾರ್ಥಿಗಳಿಗೆ ಸಹಿತ ಮಹಿಳೆಯರಿಗೆ ಈ ಯೋಜನೆ ವರದಾನವಾಗಿದೆ.

Post a Comment

0 Comments


ಜಾಹೀರಾತು

Responsive Advertisement