ಆಲುವಾ: ಖಾಸಗಿ ಬಸ್ ಉದ್ಯಮವನ್ನು ನಾಶಪಡಿಸುತ್ತಿರುವ ಸರ್ಕಾರಿ ನೀತಿಯ ವಿರುದ್ಧ ಖಾಸಗಿ ಬಸ್ ಮಾಲೀಕ ಒರ್ವರು ವಿಶೇಷ ರೀತಿಯ ಪ್ರತಿಭಟನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಂದಿರಾ ಗ್ಯಾರಂಟಿ ಯೋಜನೆಯಡಿ, ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನಾಳೆಯಿಂದ ಆರಂಭವಾಗಲಿದೆ. ಇದೇ ಸಂದರ್ಭ ಇದನ್ನು ಪ್ರತಿಭಟಿಸಿ ಆಲುವಾ-ಮಂಜಲಿ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಲಿಟಲ್ ಫ್ಲವರ್ ಬಸ್‌ನಲ್ಲಿ ಪುರುಷರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಮೂಲಕ ವಟ್ಟಪರಂಬ ನಿವಾಸಿಯಾದ ಬಸ್ ಮಾಲೀಕ ಬಿ.ಒ. ಡೇವಿಸ್ ವಿಶೇಷ ಪ್ರತಿಭಟನೆ ನಡೆಸಲಿದ್ದಾರೆ. ಬೆಳಿಗ್ಗೆ 6.30 ರಿಂದ ರಾತ್ರಿ 8 ರವರೆಗೆ 7 ಟ್ರಿಪ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ರಿದ್ದು. ಕೆ.ಎಸ್.ಆರ್.ಟಿ.ಸಿ.ಯಲ್ಲಿ ಉಚಿತ ಪ್ರಯಾಣವನ್ನು ಹೊರತುಪಡಿಸಿ, ಆ ದಿನ ಪ್ರಯಾಣಿಸುವ ಎಲ್ಲಾ ಮಹಿಳೆಯರಿಗೆ ಸಿಹಿತಿಂಡಿಗಳನ್ನು ನೀಡಿ ಸನ್ಮಾನಿಸಲಾಗುವುದು. ಬಸ್ ಆಪರೇಟರ್ಸ್ ಆಸೋಶಿಯೇಷನ್ ನ ನಾಯಕರೂ ಆಗಿರುವ ಡೇವಿಸ್, ಇಂದಿರಾ ಗ್ಯಾರಂಟಿ ಯೋಜನೆಯು ಸಾರ್ವಜನಿಕ ಸಾರಿಗೆ ಕ್ಷೇತ್ರದ ಕುಸಿತ ಮತ್ತು ಖಾಸಗಿ ಬಸ್‌ಗಳ ಉಳಿವಿಗೆ ಬೆದರಿಕೆ ಹಾಕುತ್ತದೆ ಎಂದು ಆರೋಪಿಸಿ ಈ ವಿಭಿನ್ನ ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದು ಬಂದಿದೆ.

0 Comments