ಕಾಸರಗೋಡು : ಮಾಯಿಪ್ಪಾಡಿ ಗುತ್ತು ಇಂದಿರಾ ರೈ ಮರತ್ತಿಲ (84) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಮೃತರು ಕುಂಬ್ಡಾಜೆ ಗ್ರಾಮ ಪಂಚಾಯತಿನ ಮಾಜಿ ಸದಸ್ಯೆಯಾಗಿದ್ದರು ಪುತ್ರಕಳ ದಿ.ರಾಘವ ರೈ ಅವರ ಪತ್ನಿಯಾದ ಇವರು ಮಾಜಿ ಸಂಸದ ಎಂ.ರಾಮಣ್ಣ ರೈ ಅವರ ಸಹೋದರಿಯಾಗಿದ್ದಾರೆ. ಮೃತರು ಮಕ್ಕಳಾದ ಜಯಶ್ರೀ ಆಳ್ವ , ವಿಶಾಲಾಕ್ಷ ಪುತ್ರಕಳ (ನಿವೃತ್ತ ಅಧ್ಯಾಪಕ,ಕನ್ನಡ ಸಂಘಟಕರು), ಅಶೋಕ ರೈ (ಕಾಸರಗೋಡು ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ನಿವೃತ್ತ ಪ್ರಬಂಧಕ), ಸಂತೋಷ್ ಕುಮಾರ್ ಪುತ್ರಕಳ (ಸಾಮಾಜಿಕ ಕಾರ್ಯಕರ್ತ) ಅಳಿಯ ಸುರೇಂದ್ರ ಆಳ್ವ ಬಾಲುಶ್ಯೇರಿ, ಸೊಸೆಯಂದಿರಾದ ಶ್ರೀಲತಾ (ಅಧ್ಯಾಪಕಿ), ಚಿತ್ರಕಲಾ ಎ.ರೈ, ಪ್ರವೀಣ ಕುಮಾರಿ ಹಾಗೂ ಮೊಮ್ಮಕ್ಕಳು, ಅಪಾರ ಬಂಧುಬಳಗವನ್ನಗಲಿದ್ದಾರೆ.

0 Comments