Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮುಜುಂಗಾವಿನಲ್ಲಿ ಕಟ್ಟಡ ನಿರ್ಮಾಣದ ವೇಳೆ ಕೆಳಕ್ಕೆ ಬಿದ್ದು ಕಾರ್ಮಿಕ ಬೇಳ ನಿವಾಸಿ ಪ್ರಾನ್ಸಿಸ್ ಡಿಸೋಜ ಮೃತ್ಯು

 

ಬೇಳ : ಕಟ್ಟಡ ನಿರ್ಮಾಣ ಕೆಲಸದ ಮಧೈ ಕೆಳಕ್ಕೆ ಬಿದ್ದು ಕಾರ್ಮಿಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೇಳ ಸಮೀಪದ ಕೊಳಂಬೆ ನಿವಾಸಿ ಫ್ರಾನ್ಸಿಸ್ ಡಿ.ಸೋಜ(47) ಮೃತಪಟ್ಟ ದುರ್ದೈವಿ. ನಿನ್ನೆ (ಶುಕ್ರವಾರ) ಸಾಯಂಕಾಲ  ಮುಜುಂಗಾವು ಬಳಿ ಈ ದುರ್ಘಟನೆ ನಡೆದಿದೆ. ಕೆಳಕ್ಕೆ ಬಿದ್ದ ಫ್ರಾನ್ಸಿಸ್ ಡಿ.ಸೋಜರನ್ನು ಜತೆಗಿದ್ದವರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಕುಂಬಳೆ ಪೊಲೀಸರು ಕೇಸು ದಾಖಲಿಸಿದರು. ಇವರು ಮಾರ್ಸಲ್ ಡಿ.ಸೋಜ-ಪೌಲಿನ್ ಡಿ.ಸೋಜ ದಂಪತಿಯ ಪುತ್ರರಾಗಿದ್ದಾರೆ.‌ ಮೃತರು ಸಹೋದರ, ಸಹೋದರಿಯರಾದ ಪಾಟ್ರಿಕ್ ಡಿ.ಸೋಜ, ಮರಿಯ ಡಿ.ಸೋಜ, ಮಾರ್ಗರೇಟ್ ಡಿ.ಸೋಜ, ಲಿಲ್ಲಿ ಡಿ.ಸೋಜ, ಪ್ಲಾವಿಯ ಡಿ.ಸೋಜ, ಮಾಕ್ಸಿಂ ಮೆಲ್ವಿನ್ ಡಿ.ಸೋಜ, ಸಂದೀಪ್ ಡಿ.ಸೋಜ, ಬೆನೆಡಿಕ್ಟಾ ಡಿ.ಸೋಜ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments



ಜಾಹೀರಾತು

Responsive Advertisement