ಕಾಸರಗೋಡು: ತನ್ನ ಸ್ವಂತ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರಾಗುವ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಿರುವ ಪಿ. ನಿತಿನ್ ರಾಜ್ ಪಾತ್ರರಾಗಿದ್ದಾರೆ. ಕಾಞಂಗಾಡ್ ಬಳಿಯ ಅಜನೂರು ಪಂಚಾಯತ್‌ನ ರಾವಣೇಶ್ವರಂ ಸಮೀಪದ ಕಲರಿಕ್ಕಲ್‌ನ ನಿವಾಸಿಯಾದ ನಿತಿನ್ ರಾಜ್ ಕಲರಿಕ್ಕಲ್‌ನ ರಾಜೇಂದ್ರನ್ ಮತ್ತು ಪಿ. ಲತಾ ದಂಪತಿಗಳ ಪುತ್ರರಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ರಾವಣೇಶ್ವರಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿ ಉನ್ನತ ಮಾಧ್ಯಮಿಕ ಶಿಕ್ಷಣವನ್ನು ಕಾಞಂಗಾಡ್‌ನ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲೂ ಬಳಿಕ ಕೊಟ್ಟಾಯಂನ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಆದರೆ ತನ್ನ ಜೀವನದ ಸಾಧನೆಯನ್ನು ಕೇವಲ ಎಂಜಿನಿಯರ್ ಆಗುವುದಕ್ಕೆ ಮಾತ್ರ ಸೀಮಿತವಾಗಿರಿಸದೆ ಐಎಎಸ್ ಆಗುವ ಕನಸು ಕಂಡವರು. ಕಠಿಣ ಪರಿಶ್ರಮದ ನಂತರ, 2018 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 210 ನೇ ರ‍್ಯಾಂಕ್ ಗಳಿಸುವ ಮೂಲಕ ಅವರು ಪೊಲೀಸ್ ಸೇವೆಗೆ ಸೇರಿದರು. 2019 ರ ಐಎಎಸ್ ಬ್ಯಾಚ್‌ನ ನಿತಿನ್‌ರಾಜ್ ಅವರನ್ನು ಮೊದಲು ವಯನಾಡಿನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡರು. ತಿರುವನಂತಪುರಂ ನಗರ ಉಪ ಪೊಲೀಸ್ ಆಯುಕ್ತ ಮತ್ತು ವಡಕರ ಗ್ರಾಮೀಣ ಜಿಲ್ಲಾ ಪೊಲೀಸ್ ಮುಖ್ಯಸ್ಥ ಹುದ್ದೆಗಳನ್ನು ಅಲಂಕರಿಸಿದರು. ನಂತರ ಕಣ್ಣೂರು ನಗರ ಪೊಲೀಸ್ ಆಯುಕ್ತರಾಗಿ, ಅಲ್ಲಿಂದ ನಿತಿನ್ ರಾಜ್ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರಾಗಿ ತಮ್ಮ ಸ್ಚಂತ ಜಿಲ್ಲೆಗೆ ತಲುಪಿದ್ದಾರೆ ಅವರ ಪತ್ನಿ ಲಕ್ಷ್ಮಿ ಕೃಷ್ಣನ್, ಆಲಪ್ಪುಳ ಮೂಲದವರು ಮತ್ತು ಮಂಗಳೂರಿನಲ್ಲಿ ವೈದ್ಯರಾಗಿದ್ದಾರೆ.

0 Comments