Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಂಟು ತಿಂಗಳ ಕಂದಮ್ಮನ ಗಂಟಲಲ್ಲಿ ಸಿಲುಕಿದ ಎಲ್‌ಇಡಿ ಬಲ್ಬ್ : ವೈದ್ಯರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

 

ಮಡಿಕೇರಿ: ಆಟವಾಡುತ್ತಿದ್ದ ವೇಳೆ ಎಲ್‌ಇಡಿ ಬಲ್ಬನ್ನು ನುಂಗಿದ ಎಂಟು ತಿಂಗಳ ಕಂದಮ್ಮನನ್ನು ವೈದ್ಯರು ಯಶಸ್ವಿಯಾಗಿ ರಕ್ಷಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.

ಮನೆಯಲ್ಲಿದ್ದ ವೇಳೆ ಮಗು ವಿಪರೀತವಾಗಿ ಅಳತೊಡಗಿದ ಕಾರಣ ಆತಂಕಗೊಂಡ ಪೋಷಕರು ತಕ್ಷಣವೇ ಮಗುವನ್ನು ಮಡಿಕೇರಿ ನಗರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆರಂಭದಲ್ಲಿ ಮಗುವಿನ ಅಸ್ವಸ್ಥತೆಗೆ ಕಾರಣ ಏನು ಎಂಬುದು ತಿಳಿಯದಿದ್ದರೂ, ವೈದ್ಯರು ತಪಾಸಣೆ ನಡೆಸಿ ಎಕ್ಸ್‌ರೇ ಪರೀಕ್ಷೆ ಮಾಡಿಸಿದ್ದಾರೆ.

ಪರೀಕ್ಷೆಯ ವೇಳೆ ಮಗುವಿನ ಗಂಟಲು ಭಾಗದಲ್ಲಿ ಲೋಹದ ವಸ್ತುವೊಂದು ಸಿಲುಕಿರುವುದು ಪತ್ತೆಯಾಗಿದ್ದು, ಮೊದಲಿಗೆ ಅದು ಪಿನ್ ಆಗಿರಬಹುದೆಂದು ಶಂಕಿಸಲಾಗಿತ್ತು. ಬಳಿಕ ಲ್ಯಾರಿಂಗೊಸ್ಕೋಪ್ ಮೂಲಕ ನಡೆಸಿದ ಪರೀಕ್ಷೆಯಲ್ಲಿ ಗಂಟಲಿನಲ್ಲಿ ಎಲ್‌ಇಡಿ ಬಲ್ಬ್ ಸಿಲುಕಿರುವುದು ದೃಢಪಟ್ಟಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಇಎನ್‌ಟಿ ತಜ್ಞೆ ಡಾ. ರಾಜಶ್ರಿ ಹಾಗೂ ಮಕ್ಕಳ ತಜ್ಞ ಡಾ. ಖುಶ್ವಂತ್ ನೇತೃತ್ವದ ವೈದ್ಯರ ತಂಡ, ಯಾವುದೇ ಶಸ್ತ್ರಚಿಕಿತ್ಸೆ ನಡೆಸದೇ ಸುರಕ್ಷಿತವಾಗಿ ಬಲ್ಬನ್ನು ಹೊರತೆಗೆದಿದೆ.

ಆಟವಾಡುವ ಸಂದರ್ಭದಲ್ಲೇ ಮಗು ಬಲ್ಬನ್ನು ಬಾಯಿಗೆ ಹಾಕಿಕೊಂಡು ನುಂಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ.  ವೈದ್ಯರ ಸಮಯೋಚಿತ ಚಿಕಿತ್ಸೆ ಮತ್ತು ಪೋಷಕರ ತಕ್ಷಣದ ಸ್ಪಂದನೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.

Post a Comment

0 Comments

ಜಾಹೀರಾತು

Responsive Advertisement