Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸೀತಾಂಗೋಳಿಯಿಂದ ನಾಪತ್ತೆಯಾಗಿದ್ದ ಯುವತಿ ಪಾಲಕ್ಕಾಡ್ ರೈಲು ನಿಲ್ದಾಣದಲ್ಲಿ ಪತ್ತೆ

 

                                                                                                                                ಸಾಂದರ್ಭಿಕ ಚಿತ್ರ

ಕುಂಬಳೆ : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಂಗೋಳಿಯಿಂದ ಕಾಣೆಯಾಗಿದ್ದ 23 ವರ್ಷದ ಯುವತಿಯನ್ನು ಪಾಲಕ್ಕಾಡ್ ರೈಲು ನಿಲ್ದಾಣದಲ್ಲಿ ಪತ್ತೆಹಚ್ಚಲಾಗಿದೆ. ಅಸ್ಸಾಂ ಮೂಲದ ಈ ಯುವತಿ ಸೀತಾಂಗೋಳಿ ಬಿವರೇಜಸ್ ಅಂಗಡಿ ಸಮೀಪ ವಾಸವಾಗಿದ್ದರು.

ಯುವತಿ ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದ ಬಳಿಕ ಪೊಲೀಸರು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಹಾಗೂ ಸಂಬಂಧಿತ ಇಲಾಖೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಬಳಿಕ ಪಾಲಕ್ಕಾಡ್ ರೈಲ್ವೆ ಪೊಲೀಸರು ಯುವತಿಯನ್ನು ರೈಲು ನಿಲ್ದಾಣದಲ್ಲಿ ಪತ್ತೆಹಚ್ಚಿ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ತಿಳಿದ ತಕ್ಷಣ ಕುಂಬಳೆ ಪೊಲೀಸರು ಪಾಲಕ್ಕಾಡ್‌ಗೆ ತೆರಳಿ ಯುವತಿಯನ್ನು ವಶಕ್ಕೆ ಪಡೆದು ಕಾಸರಗೋಡಿಗೆ ಕರೆತಂದಿದ್ದಾರೆ. ಯುವತಿಯ ವಿವರವಾದ ಹೇಳಿಕೆಯನ್ನು ದಾಖಲಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ಯುವತಿ ತಾನು ವಾಸಿಸುತ್ತಿದ್ದ ಕ್ವಾರ್ಟರ್ಸ್‌ನಿಂದ ಹೊರಟು ಹೋಗಿದ್ದು, ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ಕಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದರು.

Post a Comment

0 Comments

ಜಾಹೀರಾತು

Responsive Advertisement