Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ದುಬೈಯಲ್ಲಿ ಸೃಜನಶೀಲ ಕಲಾವಿದೆ ಮಮತಾ ಕೋಟ್ಯಾನ್ ರವರ 'ಲೋಟಸ್ ಅರೋರಾ' ನೈಸರ್ಗಿಕ ಮತ್ತು ವೈವಿಧ್ಯಮಯ ಗಿಡಗಳ ಕಲಾಕೃತಿ ಅನಾವರಣ

ಯುಎಇ : ದುಬೈಯಲ್ಲಿ ನೆಲೆಸಿರುವ ಸೃಜನಶೀಲ ಕಲಾವಿದೆ  ಮಮತಾ ರವಿ ಕೋಟ್ಯಾನ್ ಅವರು 'ಲೋಟಸ್ ಅರೋರಾ – ನೈಸರ್ಗಿಕ ಮತ್ತು ವೈವಿಧ್ಯಮಯ ಗಿಡಗಳ ಕಲಾಕೃತಿ' ಎಂಬ ವಿಶಿಷ್ಟ ಕಲಾ ಪ್ರದರ್ಶನವನ್ನು ದುಬೈನ ಅಲ್ ಗಿಸೈಸ್‌ನ ಅಮಿಟಿ ಶಾಲೆಯಲ್ಲಿ ಭವ್ಯವಾಗಿ ಆಯೋಜಿಸಿದರು. ಪ್ರಕೃತಿ ಪ್ರೇಮಿಗಳು, ಕಲಾಭಿಮಾನಿಗಳು ಹಾಗೂ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. 

ಮಂಗಳೂರಿನ ಕದ್ರಿ ಮೂಲದ ಮಮತಾ ಅವರು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದು, ನಂತರ ಫೈನ್ ಆರ್ಟ್ಸ್ ಮತ್ತು ಹೋಮ್ ಸೈನ್ಸ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ಕುಟುಂಬದ ಸೃಜನಾತ್ಮಕ ಹಿನ್ನೆಲೆಯಿಂದ ಪ್ರೇರಿತರಾಗಿ ಬಾಲ್ಯದಿಂದಲೇ ಕಲೆ ಮತ್ತು ಕೈಚಳಕದ ಮೇಲಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದು ತಮ್ಮ ನುರಿತ ಸೃಜನಶೀಲ ಕಲಾ ಪ್ರಕಾರಗಳಿಂದ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮೆಚ್ಚುಗೆ ಗಳಿಸಿದ್ದಾರೆ.

ಪ್ರದರ್ಶನದಲ್ಲಿ ಹೂವು ಹಾಗೂ ಸಸ್ಯ ಆಧಾರಿತ ನೇಚರ್ ಗಿಫ್ಟ್ ವಿನ್ಯಾಸಗಳು, ಚಿತ್ರಕಲೆಗಳು ಮತ್ತು ನೈಸರ್ಗಿಕ ಜೀವನಶೈಲಿಯಿಂದ ಪ್ರೇರಿತ ಅಲಂಕಾರಿಕ ಕಲಾಕೃತಿಗಳು, ಮನೆಯ ಶೋಭೆಯನ್ನು ಹೆಚ್ಚಿಸುವ ನೈಸರ್ಗಿಕ ಗಿಡಗಳು ನೆರೆದವರ ಗಮನಸೆಳೆದವು. ವರ್ಣರಂಜಿತ ಬಣ್ಣಗಳು ಮತ್ತು ವಿಶಿಷ್ಟ ವಿನ್ಯಾಸಗಳ ಮೂಲಕ ಮೂಡಿಬಂದ ಅವರ ಕಲಾಕೃತಿಗಳು ಸೌಂದರ್ಯ, ನವೀನತೆ ಮತ್ತು ಕಲಾತ್ಮಕ ಮೌಲ್ಯವನ್ನು ಪ್ರತಿಬಿಂಬಿಸಿತು. ಪ್ರತಿಯೊಂದು ಕೃತಿಯಲ್ಲೂ ಅಡಗಿದ್ದ ವಿಶಿಷ್ಟತೆ ಮತ್ತು ಪರಿಶ್ರಮವನ್ನು ಕಲಾಭಿಮಾನಿಗಳು ವಿಶೇಷವಾಗಿ ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಖ್ಯಾತ ಕಲಾವಿದೆ ವೀಣಾ ವಾಸುದೇವ ದೇವಗಿರಿ, ಮ್ಯಾಕ್ಸ್ ಟಾಲೆಂಟ್ ಗ್ಲೋಬಲ್ ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಶೆಟ್ಟಿ ಹಾಗೂ ಸನ್‌ಸ್ಕೇಪ್ ಲ್ಯಾಂಡ್‌ಸ್ಕೇಪ್ & ಗಾರ್ಡನಿಂಗ್ ಮತ್ತು ಸೂಕ್ ಗಾರ್ಡನ್ ಸಂಸ್ಥಾಪಕರಾದ  ಹರೀಶ್ ಗೌಡ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಗಣೇಶ್ ರೈ ಮತ್ತು ಗಿರೀಶ್ ನಾರಾಯಣ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಯುಎಇ ಯ ವಿವಿಧ ಸಂಘಟನೆಗಳ ಪ್ರಮುಖರು ಪಾಲುಪಡೆದಿದ್ದು, ಕಲಾಪೋಷಕರಾದ ದಿವಾಕರ್ ಶೆಟ್ಟಿ,,  ರೂಪಾಲಿ ಪ್ರವೀಣ್ ಶೆಟ್ಟಿ,, ಶಶಿಧರ್ , ನಾಗರಾಜಪ್ಪ, ದೀಪಕ್ ಎಸ್.ಪಿ., ಡಾ. ರಶ್ಮಿ ನಂದಕಿಶೋರ್, ಗುಣಶೀಲ ಶೆಟ್ಟಿ, ದಯಾ ಕಿರೋಡಿಯನ್, ಪ್ರಭಾಕರ್ ಡಿ. ಸುವರ್ಣ, ನಾಗರಾಜ್ ರಾವ್ ಉಡುಪಿ, ಸುಂಗದ್‌ರಾಜ್ ಬೇಕಲ್,  ರಘುರಾಮ್ ಶೆಟ್ಟಿಗಾರ್, ಹರೀಶ್ ಕೋಡಿ,  ಲವೀನಾ ಫರ್ನಾಂಡಿಸ್, ಧನಂಜಯ ಶೆಟ್ಟಿಗಾರ್, ಸತೀಶ್ ಶೆಟ್ಟಿ, ಸಂದೀಪ್ ಕೋಟ್ಯಾನ್ , ಸತೀಶ್ ಉಳ್ಳಾಲ್, ಚಿದಾನಂದ ಪೂಜಾರಿ ಹಾಗೂ  ಜಯಂತ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರದರ್ಶನದಲ್ಲಿದ್ದ ಅನೇಕ ಕಲಾಕೃತಿಗಳು ಆಧುನಿಕ ಮನೆಗಳ ಅಲಂಕಾರಿಕ ವಿನ್ಯಾಸಗಳಿಗೆ ಅತ್ಯುತ್ತಮ ಆಯ್ಕೆಯಾಗಬಹುದು ಎಂದು ಕಲಾಭಿಮಾನಿಗಳು ಅಭಿಪ್ರಾಯಪಟ್ಟರು.  ಆರತಿ ಅಡಿಗರವರು  ಕಾರ್ಯಕ್ರಮವನ್ನು ನಿರೂಪಿಸಿದರು.

ಹೆಚ್ಚಿನ ಮಾಹಿತಿಗಾಗಿ  ಮಮತಾ ರವಿ ಕೋಟ್ಯಾನ್  ಅವರನ್ನು +971 55 9062710 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಅಥವಾ mamthaart@gmail.com ಗೆ ಇಮೇಲ್ ಮಾಡಬಹುದು. ಇನ್‌ಸ್ಟಾಗ್ರಾಂನಲ್ಲಿ @lotusaurora.giftstudio ಮೂಲಕ ಅವರ ಕಲಾ ಪಯಣವನ್ನು ಅನುಸರಿಸಬಹುದು ಎಂದು ಕೋರಲಾಗಿದೆ.

Post a Comment

0 Comments


ಜಾಹೀರಾತು

Responsive Advertisement