Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಂಬ್ರಾಣದಲ್ಲಿ 'ಆಪರೇಷನ್ ಥಂಡರ್' ವೇಳೆ ಗಾಂಜಾ ಗಿಡ ಪತ್ತೆ; ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು

ಮಂಜೇಶ್ವರ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಬ್ರಾಣದಲ್ಲಿರುವ ಸರ್ಕಾರಿ ಬೇಸಿಕ್ ಎಲ್‌ಪಿ ಶಾಲೆಯ ಆವರಣದಲ್ಲಿ  ಸುಮಾರು 35 ಸೆಂ.ಮೀ. ಎತ್ತರದ ಗಾಂಜಾ ಗಿಡವನ್ನು ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಅಬಕಾರಿ ವಲಯ ನಿರೀಕ್ಷಕ ಸಲೀಂ ಕುಮಾರ್ ದಾಸ್ ನೇತೃತ್ವದ ತಂಡ ಅಬಕಾರಿ ಮಂತ್ರಿಗಳು ಜಾರಿಗೆ ತಂದ   'ಆಪರೇಷನ್ ಥಂಡರ್' ಭಾಗವಾಗಿ ನಡೆಸಿದ  ಕಾರ್ಯಾಚರಣೆಯಲ್ಲಿ ಬಂಬ್ರಾಣ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ವೇಳೆ  ಗಾಂಜಾ ಗಿಡ ಪತ್ತೆಯಾಯಿತು. ಬಳಿಕ ಗಿಡವನ್ನು ವಶಕ್ಕೆ ಪಡೆದು ಎನ್‌ಡಿಪಿಎಸ್ (ಮಾದಕ ದ್ರವ್ಯ ಮತ್ತು ಮನೋವಿಕಾರಿ ಪದಾರ್ಥಗಳ ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಕುಂಬಳೆ ರೇಂಜ್ ಕಚೇರಿಗೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಹಾಯಕ ಅಬಕಾರಿ ನಿರೀಕ್ಷಕ (ಗ್ರೇಡ್) ಸಂತೋಷ್ ಕುಮಾರ್ ವಿ., ದಿನೇಶನ್ ಕುಂದತ್ತಿಲ್, ಸಿವಿಲ್ ಅಬಕಾರಿ ಅಧಿಕಾರಿ (ಎಚ್‌ಜಿ) ಎಂ.ವಿ. ಸುಧೀಂದ್ರನ್, ಮೋಹನ ಕುಮಾರ್ ಎಲ್., ಚಾಲಕ ಸತ್ಯನ್ ಇ.ಕೆ., ಕುಂಬಳೆ ರೇಂಜ್ ಅಬಕಾರಿ ನಿರೀಕ್ಷಕ ಕೆ.ವಿ. ಶ್ರಾವಣ್ ಹಾಗೂ  ಮೊಹಮ್ಮದ್ ಸಾದಿಕ್ ಭಾಗವಹಿಸಿದ್ದರು.  

 ‘ಆಪರೇಷನ್ ಥಂಡರ್’ ಕೇರಳದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ, ಗೂಂಡಾ ಚಟುವಟಿಕೆಗಳು ಹಾಗೂ ಸಂಘಟಿತ ಅಪರಾಧಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರದ ಅಬಕಾರಿ ಇಲಾಖೆ ಆರಂಭಿಸಿರುವ ವಿಶೇಷ ಕಾರ್ಯಾಚರಣೆಯಾಗಿದೆ.

Post a Comment

0 Comments

ಜಾಹೀರಾತು

Responsive Advertisement