ಕಾಸರಗೋಡು : ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಜಿಯವರು ಪ್ರಮಾಣ ವಚನ ಸ್ವೀಕರಿಸಿದ ತಾರೀಕಿನಂದು ಕಳೆದ 12 ವರ್ಷದಿಂದ ಪ್ರತಿ ತಿಂಗಳು ವಿಶೇಷ ಕಾರ್ತಿಕ ಪೂಜೆ, ವರ್ಷದಲ್ಲಿ ಭಜನೆ ಮತ್ತು ಕುಣಿತ ಭಜನೆ ಇತ್ಯಾದಿ ಕಾರ್ಯಕ್ರಮವನ್ನು ನಡೆಸುತ್ತಿದ್ದು ವಿವಿಧೆಡೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಗರದ 'ಮೋದಿ ಫ್ಯಾನ್ಸ್ ಕಾಸರಗೋಡು' ಮೋದಿಜಿಯವರ ಹೆಸರಿನಲ್ಲಿ ಇದೇ ಜೂನ್ 9 ನೇ ತಾರೀಕಿನಂದು 12 ವರ್ಷ ಪೂರೈಸಿದ ಹಾಗೂ ಭಾರತದ ಪ್ರಧಾನ ಮಂತ್ರಿ ಸ್ಥಾನದಲ್ಲಿ ಅತೀ ಹೆಚ್ಚು ಕಾಲಾವಧಿ ಆಡಳಿತ ನಡೆಸಿ ದಾಖಲೆ ನಿರ್ಮಿಸಿದ ಸಂದರ್ಭದಲ್ಲಿ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ ನಡೆಸಲಾಯಿತು, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ಪೂಜೆ ನೆರವೇರಿಸಿ ಮೋದಿಜಿಯವರು ದೇಶ ಸೇವೆ ಮಾಡಲು ಧೀರ್ಘ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥನೆಗೈದರು. ಈ ಸಂದರ್ಭದಲ್ಲಿ ಬಿ.ಜೆ.ಪಿ. ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಪ್ರಧಾನ ಕಾರ್ಯದರ್ಶಿ ಸುನಿಲ್.ಪಿ, ಉಪಾಧ್ಯಕ್ಷ ಪಿ.ರಮೇಶ್, ಕಾಸರಗೋಡು ಜಿಲ್ಲಾ ಸೆಲ್ ಕೋರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ, ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್, ಹಿರಿಯ ಧಾರ್ಮಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಶ್ರೀಲತಾ ಟೀಚರ್, ವರಪ್ರಸಾದ್ ಕೋಟೆಕಣಿ, ಕಲ್ಮಾಡಿ ಸದಾಶಿವ ಆಚಾರ್ಯ, ಲಕ್ಷ್ಮೀಕಾಂತ, ನಮೋ ಫ್ಯಾನ್ಸಿನ ಪ್ರಮುಖರಾದ ಕಿಶೋರ್ ಕುಮಾರ್ ಎಸ್.ವಿ.ಟಿ, ರವಿ ಕೇಸರಿ, ಪುರಂದರ ಶೆಟ್ಟಿ, ಶಂಕರನಾರಾಯಣ ಹೊಳ್ಳ, ನವಿನ್ ಬಟ್ಟಂಪಾರೆ, , ಸುಜಯ್, ತುಕರಾಮ ಆಚಾರ್ಯ ಕೆರೆಮನೆ, ಪ್ರಮೋದ್ ಕುಮಾರ್, ಪ್ರೇಮ್ ಜಿತ್, ನಾಮದೇವ ಪೈ, ವಸಂತ್ ಕೆರೆಮನೆ, ವಿಜಯ ಶೆಟ್ಟಿ, ಶಾರದಾ ರಾವ್, ಸವಿತಾ ಕಿಶೋರ್, ಶ್ರೀದೇವಿ, ಸೌಮ್ಯ, ಲೀಲಾ, ಸವಿತಾ ಮುಂತಾದವರು ನೇತೃತ್ವ ವಹಿಸಿದರು. ಶ್ರೀ ವೆಂಕಟರಮಣ ಮಹಿಳಾ ಭಜನಾ ತಂಡದಿಂದ ಭಜನೆ ಸಂಕೀರ್ತನೆ ನಡೆಯಿತು.
0 Comments