Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಾಜಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಚಗೃಹದಲ್ಲಿ ಸಾಮಾಜಿಕ ಜಾಗೃತಿಗೆ ಮಾದರಿಯಾದ ವಿಧವಾ ಪುನರ್ವಿವಾಹ

ಮಂಗಳೂರು : ಮಾಜಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಸ್ಚಗೃಹದಲ್ಲಿ ವಿಧವಾ ಪುನರ್ವಿವಾಹ ಸಮಾರಂಭವೊಂದು ನಡೆದಿದ್ದು ಸಾಮಾಜಿಕ ಜಾಗೃತಿಗೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕರಂದ್ಲಾಜೆಯಲ್ಲಿರುವ ಅವರ ಸ್ವಗೃಹದಲ್ಲಿ ಅವರದೇ ಮುತುವರ್ಜಿಯಲ್ಲಿ‌ ನಡೆದ ವಿವಾಹ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ಪ್ರಮುಖರು ಉಪಸ್ಥಿತರಿದ್ದರು. ಇದೊಂದು ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವ ಕಾರ್ಯಕ್ರಮವಾಗಿ ಗಮನ ಸೆಳೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕರು, ವಿಧವೆ ಹಾಗೂ ವಿಧುರರ ಪುನರ್ವಿವಾಹವು ಸಮಾಜದಲ್ಲಿ ಸ್ವೀಕಾರಾರ್ಹತೆ ಪಡೆಯಬೇಕಾದ ಮಹತ್ವದ ಸಾಮಾಜಿಕ ವಿಷಯವಾಗಿದೆ ಎಂದು ಹೇಳಿದರು. ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿದವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಪುನರ್ವಿವಾಹವನ್ನು ಎಲ್ಲರೂ ಹೃತ್ಪೂರ್ವಕವಾಗಿ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಹಳೆಯ ಸಾಮಾಜಿಕ ಕಳಂಕಗಳು ಮತ್ತು ಪೂರ್ವಾಗ್ರಹಗಳನ್ನು ಮೀರಿ, ಪ್ರತಿಯೊಬ್ಬರೂ ಪ್ರೀತಿ, ಒಡನಾಟ ಹಾಗೂ ಗೌರವಯುತ ಜೀವನ ನಡೆಸಲು ಮತ್ತೊಂದು ಅವಕಾಶ ಪಡೆಯುವ ಹಕ್ಕು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ಪುನರ್ವಿವಾಹಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಹಲವರು ಅಭಿಪ್ರಾಯಪಟ್ಟರು. ನವವಿವಾಹಿತ ದಂಪತಿಗಳಿಗೆ ಶುಭಾಶಯಗಳನ್ನು ತಿಳಿಸಿದ ಶೋಭಾ ಕರಂದ್ಲಾಜೆ ಅವರು ದಾಂಪತ್ಯ ಪರಸ್ಪರ ಒಗ್ಗಟ್ಟಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು. 

Post a Comment

0 Comments

ಜಾಹೀರಾತು

Responsive Advertisement