ಟೆಹ್ರಾನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಪ್ರಚೋದನಾತ್ಮಕ ಫ್ಲೆಕ್ಸ್ ಅಳವಡಿಸಲಾಗಿದೆ. ಶವಪೆಟ್ಟಿಗೆಯಲ್ಲಿ ಮಲಗಿರುವಂತೆ ಟ್ರಂಪ್ ಅವರ ಚಿತ್ರವನ್ನು ಪ್ರದರ್ಶಿಸಲಾಗಿದ್ದು, ಇದರ ಜತೆಗೆ ಬೆದರಿಕೆ ಸಂದೇಶವೂ ಸೇರಿಸಲಾಗಿದೆ.
ಟೆಹ್ರಾನ್‌ನ ಇಂಕಿಲಾಬ್ ಚೌಕದಲ್ಲಿ ಅಳವಡಿಸಿರುವ ಈ ಬೃಹತ್ ಫ್ಕೆಕ್ಸ್ ನಲ್ಲಿ ಟ್ರಂಪ್ ಅವರ ಚಿತ್ರವನ್ನು ಕೋಟ್–ಸೂಟ್ ಧರಿಸಿದ ಸ್ಥಿತಿಯಲ್ಲಿ ತೋರಿಸಲಾಗಿದೆ. ಜೊತೆಗೆ ಇಂಗ್ಲಿಷ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಬೆದರಿಕೆ ಸಂದೇಶವನ್ನು ಬರೆಯಲಾಗಿದೆ. "ಮಿನಾಬ್‌ನ ಮಕ್ಕಳ ಸ್ಮರಣಾರ್ಥ" ಎಂಬ ಬರಹವೂ ಇದರ ಜತೆಗೆ ಕಾಣಿಸಿಕೊಂಡಿದೆ. ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಫ್ಲೆಕ್ಸ್ ಅಳವಡಿಸಲಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

0 Comments