Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸೈಬರ್ ವಂಚನೆಗೆ ನೆರವು : ವಿಟ್ಲದಲ್ಲಿ ಆರೋಪಿ ಸೆರೆ


ವಿಟ್ಲ : ಸೈಬರ್ ಅಪರಾಧಿಗಳಿಗೆ ಸಾರ್ವಜನಿಕರ  ಬ್ಯಾಂಕ್ ಖಾತೆಗಳನ್ನು ಒದಗಿಸಿ, ಅಕ್ರಮ ಹಣ ವರ್ಗಾವಣೆಗೆ ಸಹಕರಿಸುತ್ತಿದ್ದ ಆರೋಪದ ಮೇಲೆ ಜುಬೈರ್ (32) ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ತನಿಖೆಯ ವೇಳೆ, ಈತ 'ಡಿಜಿಟಲ್ ಅರೆಸ್ಟ್' ನೆಪದಲ್ಲಿ ನಡೆಯುವ ಸೈಬರ್ ವಂಚನೆಗಳಿಗೆ  ಬ್ಯಾಂಕ್ ಖಾತೆಗಳನ್ನು ಬಳಸಲು ಅವಕಾಶ ಮಾಡಿಕೊಡುತ್ತಿದ್ದ ಎಂಬುದು ದೃಢಪಟ್ಟಿದೆ. ಆರೋಪಿಯ ವಿರುದ್ಧ ಐಟಿ ಕಾಯ್ದೆ ಮತ್ತು ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಈತ ವಿಟ್ಲ ಠಾಣೆ ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಒಟ್ಟು  4 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.  ಇದೀಗ ವಶಕ್ಕೆ ಪಡೆದ  ಆರೋಪಿಗೆ  ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Post a Comment

0 Comments

ಜಾಹೀರಾತು

Responsive Advertisement