Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಶಿವಗಿರಿಯಲ್ಲಿ ಅಪಾಯದ ಅಂಚಿನಲ್ಲಿ ವಿದ್ಯುತ್‌ ಕಂಬ : ಸ್ಥಳೀಯರಲ್ಲಿ ಆತಂಕ


 ಪೆರ್ಲ: ಪೆರ್ಲ ಗುಂಡ್ಯಡ್ಕ ಶಿವಗಿರಿ ಕನ್ಯಾರುಮೂಲೆ ಸ್ವರ್ಗ ಸಂಪರ್ಕ ರಸ್ತೆಯ ಅಪ್ಪಯಮೂಲೆ ಶಿವಗಿರಿ ಮಧ್ಯೆ ರಸ್ತೆ ಬದಿಯ ಧರೆ ಕುಸಿದಿದ್ದು, ವಿದ್ಯುತ್ ಕಂಬವೊಂದು ಯಾವುದೇ ಕ್ಷಣದಲ್ಲಾದರೂ ಉರುಳಿ ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದೆ. ಇದು ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇದರಿಂದಾಗಿ ರಸ್ತೆ ಪಕ್ಕದ ಮಣ್ಣು ಇನ್ನಷ್ಟು ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಧರೆಯ ಮೇಲಿರುವ ಕಂಬದಿಂದ ವಿದ್ಯುತ್ ತಂತಿಗಳು ರಸ್ತೆಯ ಕೆಳಭಾಗದಲ್ಲಿರುವ ಮನೆಗಳ ಮೇಲಿನಿಂದ ಹಾದು ಹೋಗಿದೆ. ಯಾವ ಕ್ಷಣದಲ್ಲಾದರೂ ಕಂಬ ಉರುಳಿದರೆ ವಿದ್ಯುತ್ ತಂತಿಗಳು ಮನೆಗಳ ಮೇಲೆ ಅಪ್ಪಳಿಸಿ ಭಾರಿ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಯಾವುದೇ ದೊಡ್ಡ ದುರಂತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು, ಅಪಾಯದ ಸ್ಥಿತಿಯಲ್ಲಿರುವ ಈ ವಿದ್ಯುತ್ ಕಂಬವನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Post a Comment

0 Comments

ಜಾಹೀರಾತು

Responsive Advertisement