ಪಾಲಕ್ಕಾಡು : ಎಂಟು ದಿನಗಳ ಹಿಂದೆ ಪಾಲಕ್ಕಾಡು ಜಿಲ್ಲೆಯ ವಾಣಿಯಂಕುಳಂನಿಂದ ಏಕಾಏಕಿ ಕಾಣೆಯಾಗಿದ್ದ ಮೂವರು ಸದಸ್ಯರ ಕುಟುಂಬವನ್ನು ಪೊಲೀಸರು ಕರ್ನಾಟಕದಿಂದ ಪತ್ತೆಹಚ್ಚಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೋರನೂರು ಪೊಲೀಸ್ ತನಿಖಾ ತಂಡವು ಕರ್ನಾಟಕದ ಚಾಮರಾಜನಗರದಲ್ಲಿ ಕುಟುಂಬವನ್ನು ಪತ್ತೆಹಚ್ಚಿದೆ.
ಬೆಲ್ಲ ವ್ಯಾಪಾರ ನಡೆಸುತ್ತಿದ್ದ ಬಾಬು ಭಾಸ್ಕರ್ ಅವರ ಕುಟುಂಬವು ಕಾಣೆಯಾಗಿದೆ ಎಂದು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಮನೆ ಬೀಗ ಹಾಕಿದ್ದನ್ನು ಕಂಡು ಅನುಮಾನಗೊಂಡ ಅವರು ಕರೆ ಮಾಡಿದಾಗ ಮೂವರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು. ಸಂಬಂಧಿಕರೊಬ್ಬರ ಮದುವೆಗೆ ತೆರಳುತ್ತಿರುವುದಾಗಿ ಕುಟುಂಬ ಕೆಲವರಿಗೆ ತಿಳಿಸಿತ್ತು. ಆದರೆ ಬಳಿಕ ಯಾವುದೇ ಸಂಪರ್ಕ ಸಾಧ್ಯವಾಗದ ಕಾರಣ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ನಂತರ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ, ಕಾಣೆಯಾದ ದಿನವೇ ಬೆಳಿಗ್ಗೆ ಕುಟುಂಬ ಕರ್ನಾಟಕ ಗಡಿ ದಾಟಿರುವುದು ದೃಢಪಟ್ಟಿತು. ಆದರೆ ಹಿಂದಿರುಗುವಾಗ ವಾಹನದಲ್ಲಿ ವಿಷ್ಣು ಮಾತ್ರ ಇದ್ದುದು ಕಂಡುಬಂದಿದೆ. ಬಳಿಕ ಆತ ವಾಹನವನ್ನು ಮಲಪ್ಪುರಂ ಜಿಲ್ಲೆಯ ಘಾಟ್ ರಸ್ತೆಯಲ್ಲಿ ಬಿಟ್ಟು ಅಲ್ಲಿಂದ ತೆರಳಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕುಟುಂಬವು ಚಾಮರಾಜನಗರದಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಾಚರಣೆಯಲ್ಲಿ ಕುಟುಂಬದ ಹಿರಿಯ ಪುತ್ರ ವೈಶಾಖ್ ಕೂಡ ಪೊಲೀಸರೊಂದಿಗೆ ಕರ್ನಾಟಕಕ್ಕೆ ತೆರಳಿದ್ದರು. ಮೈಸೂರು ಭಾಗದೊಂದಿಗೆ ಸಂಪರ್ಕವಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದರ ಆಧಾರದ ಮೇಲೆ ತನಿಖೆಯನ್ನು ಕರ್ನಾಟಕದತ್ತ ವಿಸ್ತರಿಸಲಾಯಿತು. ಇದೇ ವೇಳೆ ಮಲಪ್ಪುರ ಜಿಲ್ಲೆಯ ನಾಡುಕಾಣಿ ಘಾಟ್ ರಸ್ತೆಯಲ್ಲಿ ಕುಟುಂಬದ ಪಿಕಪ್ ಜೀಪ್ ಅನಾಥವಾಗಿ ಪತ್ತೆಯಾದದ್ದು ತನಿಖೆಗೆ ಮಹತ್ವದ ಸುಳಿವಾಯಿತು.
ಕುಟುಂಬ ಕಾಣೆಯಾದ ಸುದ್ದಿ ತಿಳಿದ ಬಳಿಕ ವಿದೇಶದಲ್ಲಿದ್ದ ಹಿರಿಯ ಪುತ್ರ ವೈಶಾಖ್ ಹಾಗೂ ಅವರ ಪತ್ನಿ ಇತ್ತೀಚೆಗೆ ಊರಿಗೆ ಆಗಮಿಸಿ, ಪೊಲೀಸರೊಂದಿಗೆ ಸೇರಿ ಕುಟುಂಬದ ಹುಡುಕಾಟದಲ್ಲಿ ಭಾಗವಹಿಸಿದ್ದರು...

0 Comments