ಕಾಸರಗೋಡು : ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಕರ್ನಾಟಕ ಬ್ಯಾಂಕ್ ವತಿಯಿಂದ ಕಾಸರಗೋಡು ಜಿಲ್ಲೆಯ ಉಳಿಯತ್ತಡ್ಕದಲ್ಲಿರುವ ಪ್ರಗತಿ ವಿಶೇಷ ಶಾಲೆಗೆ ಹೊಸ ಶಾಲಾ ವಾಹನವನ್ನು ಹಸ್ತಾಂತರಿಸಲಾಯಿತು.
ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ (AGM) ಜಿ. ವಿಶ್ವನಾಥ್ ಅವರು ಶಾಲೆಯ ಅಧ್ಯಕ್ಷ ಎಸ್.ಜೆ. ಪ್ರಸಾದ್ ಅವರಿಗೆ ವಾಹನದ ಕೀಲಿ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಎಂ. ಅಶೋಕ ರೈ ವಹಿಸಿದ್ದರು. ನಿವೃತ್ತ ಬ್ಯಾಂಕ್ ಪ್ರಬಂಧಕ ಅನಂತನ್, ರಬ್ಬರ್ ಬೋರ್ಡ್‌ನ ನಿವೃತ್ತ ಉಪ ಆಯುಕ್ತ ಬಾಲಕೃಷ್ಣ ಎಸ್., ಕರ್ನಾಟಕ ಬ್ಯಾಂಕಿನ ಕಾಸರಗೋಡು ಶಾಖೆಯ ಅಧಿಕಾರಿಗಳು, ಶಾಲೆಯ ಶಿಕ್ಷಕಿಯರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಶಾಲೆಯ ಮುಖ್ಯೋಪಾಧ್ಯಾಯ ಉದಯಕುಮಾರ್ ಸ್ವಾಗತಿಸಿ, ಶಿಕ್ಷಕಿ ಚಿತ್ರಾ ವಂದಿಸಿದರು.


0 Comments