ತಿರುವನಂತಪುರ : ಕೇರಳ ರಾಜ್ಯ ಲಾಟರಿ ಇಲಾಖೆಯ ತಿರುವೋಣಂ ಬಂಪರ್ ಲಾಟರಿಯನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಬಿಡುಗಡೆಗೊಳಿಸಿದರು. ಈ ಬಾರಿ ಮೊದಲ ಬಹುಮಾನವನ್ನು 30 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದ್ದು, ಇದು ಕೇರಳ ಲಾಟರಿ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಬಹುಮಾನ ಮೊತ್ತವಾಗಿದೆ. ಕಳೆದ ವರ್ಷ ಮೊದಲ ಬಹುಮಾನ 25 ಕೋಟಿ ರೂಪಾಯಿಯಾಗಿತ್ತು.
ತಿರುವೋಣಂ ಬಂಪರ್ ಟಿಕೆಟ್‌ಗಳ ಮಾರಾಟ ಜುಲೈ 20ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 26ರಂದು ಬಹುಮಾನಗಳ ಡ್ರಾ ನಡೆಯಲಿದೆ. ಈ ಬಾರಿ ಎರಡನೇ ಬಹುಮಾನವಾಗಿ ತಲಾ 1 ಕೋಟಿ ರೂಪಾಯಿ 20 ಮಂದಿಗೆ ಹಾಗೂ ಮೂರನೇ ಬಹುಮಾನವಾಗಿ ತಲಾ 25 ಲಕ್ಷ ರೂಪಾಯಿ 20 ಮಂದಿಗೆ ನೀಡಲಾಗುತ್ತದೆ. ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ನ ಬೆಲೆ 500 ರೂಪಾಯಿ ಎಂದು ಲಾಟರಿ ಇಲಾಖೆ ತಿಳಿಸಿದೆ.

0 Comments