ಸಾಂದರ್ಭಿಕ ಚಿತ್ರ
ಪೆರ್ಲ : ನಮ್ಮ ನೆಲ, ಜಲ, ಸಂಸ್ಕೃತಿ ಉಳಿಸುವಿಕೆಯ ಉದ್ದೇಶದಿಂದ ವಾಣೀನಗರದ ಕುತ್ತಾಜೆ-ದಂಬೆಕಲ್ಲು ಗದ್ದೆಯಲ್ಲಿ ಜುಲೈ 19ರಂದು ಕೆಸರ್ಡ್ ಗೊಬ್ಬು- 2026 ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೆಸರ್ಡ್ ಗೊಬ್ಬು ಆಚರಣಾ ಸಮಿತಿ ವಾಣೀನಗರ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದವರಿಗೆ ಕ್ರೀಡಾ ಸ್ಪರ್ಧೆಗಳು, ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.
ಸ್ಪರ್ಧೆಗಳ ವಿವರ ಮಕ್ಕಳಿಗೆ : 3 ರಿಂದ 5 ನೇ ತರಗತಿ : 50 ಮೀ. ಓಟ, ಲಿಂಬೆಚಮಚ. 6 ರಿಂದ 9 ನೇ ತರಗತಿ : ಹುಡುಗರಿಗೆ : 100 ಮೀ. ಓಟ, ಮೂರು ಕಾಲಿನ ಓಟ, ಹಾಳೆ ಎಳೆಯುವುದು, ಕಂಬಳ ಓಟ ಹುಡುಗಿಯರಿಗೆ : 100 ಮೀ. ಓಟ, ಸಂಗೀತ ಕುರ್ಚಿ, ಹಾಳೆ ಎಳೆಯುವುದು, ಕಂಬಳ ಓಟ. ಸಾರ್ವಜನಿಕರಿಗೆ - ಪುರುಷರಿಗೆ : ಗೂಟ ಸುತ್ತು, ಹಿಮ್ಮುಖ ಓಟ, ಹಾಳೆ ಎಳೆಯುವುದು, ಮೂರು ಕಾಲಿನ ಓಟ, ಲಿಂಬೆಚಮಚ, ಹಗ್ಗಜಗ್ಗಾಟ, ಕಂಬಳ ಓಟ. ಸ್ತ್ರೀಯರಿಗೆ : ಗೂಟ ಸುತ್ತು, ಹಿಮ್ಮುಖ ಓಟ, ಹಾಳೆ ಎಳೆಯುವುದು, ಮೂರು ಕಾಲಿನ ಓಟ, ಲಿಂಬೆಚಮಚ, ಹಗ್ಗಜಗ್ಗಾಟ, ಕಂಬಳ ಓಟ ನಿಧಿಶೋಧನೆ. ವಿಶೇಷ ಮನರಂಜನೆಗಾಗಿ ದಂಪತಿಗಳಿಗೆ ಉಪ್ಪು ಮೂಟೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

0 Comments