Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಐತಿಹಾಸಿಕ ದಾಖಲೆ ಬರೆಯುವುದರೊಂದಿಗೆ ಮಂಜೇಶ್ವರ ಹಲಸು ಮೇಳ ಯಶಸ್ವಿ: ಮೂರು ದಿನಗಳಲ್ಲಿ 60,000ಕ್ಕೂ ಅಧಿಕ ಮಂದಿ ಮೇಳ ವೀಕ್ಷಣೆ; ಆಯೋಜಕರ ಕಾರ್ಯಕ್ಕೆ ಮೆಚ್ಚುಗೆ.

ಮಂಜೇಶ್ವರ : ಮಂಜೇಶ್ವರದಲ್ಲಿ ಪ್ರಪ್ರಥಮ ಬಾರಿಗೆ ಮೂರು ದಿನಗಳ ಕಾಲ ನಡೆದ ಮಂಜೇಶ್ವರ ಹಲಸು ಮೇಳವು ಮಂಜೇಶ್ವರದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ಮಂಜೇಶ್ವರ ಮರ್ಸಿ ಚರ್ಚ್ ನ ಧರ್ಮಗುರುಗಳಾದ ಎಡ್ವಿನ್ ಫಾನ್ಸಿಸ್ ಪಿಂಟೋ ನುಡಿದರು. ಅವರು ನಿನ್ನೆ ಸಂಜೆ ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ನಡೆದ ಹಲಸು ಮೇಳದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರದಲ್ಲಿ ಮೊದಲ ಬಾರಿಗೆ ನಡೆದ ಮೇಳ ಯಶಸ್ವಿಯಾಗಿದೆ. ನಿರೀಕ್ಷೆಗೂ ಮೀರಿ, ಮೂರು ದಿನಗಳಲ್ಲಿ ಸುಮಾರು 60 ಸಾವಿರಕ್ಕಿಂತಲೂ ಅಧಿಕ ಮಂದಿ ಕೃಷಿಕರು, ಹಲಸು ಪ್ರಿಯರು ಹಾಗೂ ಸಾರ್ವಜನಿಕರು ತಂಡೋಪತಂಡವಾಗಿ ಬಂದು ಪಾಲ್ಗೊಂಡಿದ್ದಾರೆ. ಪರಿಸರದ ಹಲವಾರು ಸಂಘ ಸಂಸ್ಥೆಗಳ ಪ್ರಚಾರ ಹಾಗೂ ಆಯೋಜಕರ ಕಾರ್ಯವೈಖರಿ ಈ ಬಾರಿ ಹಲಸು ಮೇಳದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ ಎಂದರು.

ಇದೇ ವೇಳೆ ಹೊಸಂಗಡಿ ಇನ್ಫೆಂಟ್ ಜೀಸಸ್ ಸೈರೋ ಮಲಬಾರ್ ಚರ್ಚ್ ನ ಧರ್ಮಗುರುಗಳಾದ ಲೂಯಿಸ್ ಮರಿಯಾದಾಸ್ ಮಾತನಾಡಿ ಮಂಜೇಶ್ವರದಲ್ಲಿ ನಡೆದ ಹಲಸು ಮೇಳದ ಯಶಸ್ಸಿಗೆ ಜನ ಸಾಗರವೇ ಪ್ರತ್ಯಕ್ಷ ಸಾಕ್ಷಿ, ಅದರ ಜೊತೆ ಹಿಂದಿನ ಕಾಲದ ಹಲಸಿನ ಹಣ್ಣಿನ ಭಕ್ಷ್ಯಗಳನ್ನು ಸವಿಯಲು ಜನ ಮುಗಿ ಬೀಳುವುದರೊಂದಿಗೆ ವಿವಿಧ ತರದ ಹಲಸಿನ ಹಣ್ಣುಗಳನ್ನು, ಹಾಗೂ ತಳಿಗಳನ್ನು ಪಡೆಯಲು ಜನತೆ ಮನಸು ಮಾಡಿದ್ದಾರೆ. ಮುಂದೆ ಪ್ರತೀ ಮನೆಯಲ್ಲಿ ಹಲಸಿನ ಮರ ಬೆಳೆದರೆ ಮುಂದಿನ ಪೀಳಿಗೆಗೆ ಹಲಸಿನ ಹಣ್ಣಿನ ಪ್ರಧಾನ್ಯತೆ ಏನೆಂಬುದು ತಿಳಿಯಬಹುದು. ಪರಿಸರ ಅಭಿವೃದ್ಧಿಗೆ ಮೇಳ ಪೂರಕವಾಗಿದೆ ಎಂಬುದು ಹೆಮ್ಮೆಯ ವಿಷಯ. ಮಂಜೇಶ್ವರದಲ್ಲಿ ಮೊದಲ ಬಾರಿಗೆ ಯಶಸ್ಸು ಕಂಡ ಹಲಸು ಮೇಳ ಮುಂದಿನ ವರ್ಷ ಇನ್ನಷ್ಟು ದಿನಗಳ ತನಕ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ವೇದಿಕೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲ ಗುಡ್ಡೆಕ್ಕೇರಿ, ಮಂಜೇಶ್ವರ ಗ್ರಾಮ ಪಂಚಾಯತ್ ವೆಲ್ಫೇರ್ ಚೇರ್ ಪರ್ಸನ್ ಜೆರಿನಾ ಬಾನು, ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ, ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ, ಸಾಮಾಜಿಕ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ಮಜಿಬೈಲು ಮೊದಲಾದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು. ಮಂಜೇಶ್ವರ ಹಲಸು ಮೇಳದ ಆಯೋಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ನಿರೂಪಿಸಿ, ಬೆನಕ ಇವೆಂಟ್ಸ್ ಕುಂದಾಪುರದ ಗಣೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ವಂದಿಸಿದರು.

ಹಲಸು ಮೇಳದಲ್ಲಿ ಸುಮಾರು ಆರಕ್ಕೂ ಅಧಿಕ ಹಲಸಿನ ತಳಿಗಳನ್ನು ಮಾರಾಟಕ್ಕಿಡಲಾಗಿತ್ತು. ತುಮಕೂರು ಸೇರಿದಂತೆ ಮಲೆನಾಡು ಜಿಲ್ಲೆಗಳಿಂದ ವರ್ತಕರು, ರೈತರು, ಹಲಸು ಮಾರಾಟ ಮಾಡಲು ಬಂದಿದ್ದರು. ಹಲಸು ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲಸು ಮೇಳಕ್ಕೆ ತುಮಕೂರಿನಿಂದ ಬಂದಿದ್ದದವರು ಹಲಸು ತಳಿಗಳನ್ನು ಮಾರಾಟಕ್ಕಿಟ್ಟಿದ್ದರು. ಗ್ರಾಹಕರು ಹಲವು ಬಗೆಯ ಹಲಸುಗಳ ತಳಿಗಳನ್ನು ಕೇಳಿ ಮಾಹಿತಿ ಪಡೆದರು. ಕೆಲವರು ಹಲಸು ಹಣ್ಣುಗಳನ್ನು ಖರೀದಿ ಮಾಡಿದರೆ, ಇನ್ನೂ ಕೆಲವರು ಹಲಸಿನ ತೊಳೆಗಳನ್ನು ಖರೀದಿ ಮಾಡಿದರು. ಹಲಸಿನಲ್ಲಿನ ಅಂಬಲಿ, ಕೊಬ್ಬರಿ ಹಲಸುಗಳ ಮಾಹಿತಿಯನ್ನು ಗ್ರಾಹಕರು ವರ್ತಕರಿಂದ ಕೇಳಿ ಮಾಹಿತಿ ಪಡೆದರು. ಅಲ್ಲದೇ, ಹಲಸುಗಳ ತಳಿಗಳನ್ನು ಗುರುತಿಸುವ ಬಗೆಯನ್ನ ಕೇಳಿ ಹಲಸಿನ ತಳಿಗಳ ಗುರುತಿಸುವ ಪ್ರಯತ್ನ ಮಾಡಿದರು.

ಹಲಸು ಮೇಳದಲ್ಲಿ ಮಾವು ಹಲಸುಗಳಿಂದ ಮಾಡಿದ ಖಾದ್ಯಗಳು ಗಮನ ಸೆಳೆದವು. ಹಲಸಿನ ಜಿಲೇಬಿ, ಹಲಸಿನ ಗಟ್ಟಿ, ಹಲಸಿನ ಅಪ್ಪ, ಹಲಸಿನ ಕಾಯಿ ಕಬಾಬ್, ಹಲಸಿನ ಕಾಯಿ ಮಂಚೂರಿ, ಹಲಸಿನ ಬಿರಿಯಾನಿ, ಹಲಸಿನ ಶೀರಾ, ಹಲಸಿನ ಪಾಯಸ, ಹಲಸಿನ ಬೆಣ್ಣೆ ದೋಸೆ, ಹಲಸಿನ ಹೋಳಿಗೆ, ಹಲಸಿನ ಜ್ಯೂಸ್, ನೇರಳೆ ಹಣ್ಣಿನ ಜ್ಯೂಸ್, ಪೇರಳೆ ಹಣ್ಣಿನ ಜ್ಯೂಸ್, ಸೀಯಾಳದ ಜ್ಯೂಸ್, ಅದೇ ರೀತಿ ಹಲಸಿನ ಐಸ್ ಕ್ರೀಂ, ಮಾವಿನ ಐಸ್ ಕ್ರೀಂ, ಪೇರಳೆ ಐಸ್ ಕ್ರೀಂ, ಮಾವಿನ ಐಸ್ ಕ್ರೀಂ, ನೇರಳೆ ಹಣ್ಣಿನ ಐಸ್ ಕ್ರೀಂಗಳು ಸೇರಿದಂತೆ ಹಲವು ವೈವಿಧ್ಯಮಯ ಖಾದ್ಯಗಳನ್ನು ಗ್ರಾಹಕರು ಮುಗಿಬಿದ್ದು ಪಡೆಯುತ್ತಿದ್ದು ಕಂಡು ಬಂತು. ಜೊತೆಗೆ ಹಲಸಿನಿಂದ ಮಾಡಿದ ಹಪ್ಪಳ, ಚಿಪ್ಸ್‌ಗಳನ್ನು ಗ್ರಾಹಕರು ಖರೀದಿಸಿ ಹೊಸ ರುಚಿ ಆಸ್ವಾದಿಸಿದರು. ಮಾವಿನ ಹಣ್ಣಿನ ಮತ್ತು ಹಲಸಿನ ಹಣ್ಣಿನಿಂದ ತಯಾರಿಸಿದ ಖಾದ್ಯಗಳನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋದರು. ಹಲಸಿನ ಜಿಲೇಬಿ ಹಲಸಿನ ಹೋಳಿಗೆಗೆ ಅಧಿಕ ಬೇಡಿಕೆ ಇತ್ತು. ಒಟ್ಟಾರೆಯಾಗಿ ಮಂಜೇಶ್ವರದಲ್ಲಿ ಆಯೋಜನೆಯಾಗಿರುವ ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲಸಿನ ಮೇಳದ ಮೂಲಕ ಈ ರೀತಿಯ ಪ್ರದರ್ಶನಗಳು, ಮಾರಾಟ ಮೇಳಗಳು ಆಯೋಜನೆಯಾದರೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಹಣ್ಣುಗಳು ಸಿಗುತ್ತವೆ. ಹೊಸ ಬಗೆಯ ಖಾದ್ಯಗಳ ರುಚಿನ್ನು ನೋಡಬಹುದು ಎಂದು ಗ್ರಾಹಕರು ತಿಳಿಸಿದರು.


Post a Comment

0 Comments

ಜಾಹೀರಾತು

Responsive Advertisement