ಕಾಸರಗೋಡು : ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಮುಂಬರುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಮಂಡಲ ಮಟ್ಟದ ನಾಯಕರ ಸಭೆ ನಡೆಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕಾರಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಗೋಪಕುಮಾರ್ ಉದ್ಘಾಟಿಸಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ನಾರಾಯಣ ಮಣಿಯಾಣಿ ನೀರ್ಚಾಲ್, ಬ್ಲಾಕ್ ಪಂಚಾಯತ್ ಸದಸ್ಯರೂ ಆಗಿರುವ ಖಾದರ್ ಮಾನ್ಯ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಮ ಪಟ್ಟಾಜೆ, ಶಾಫಿ ಗೋಳಿಯಡ್ಕ, ಪಿ.ಜಿ. ಚಂದ್ರಹಾಸ ರೈ, ಜಗನ್ನಾಥ ರೈ, ಪಂಚಾಯತ್ ಸದಸ್ಯರಾದ ಅಶ್ವತಿ, ಲೀಲಾವತಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಕುಮಾರನ್ ನಾಯರ್, ನಿರಂಜನ್ ರೈ, ರವೀಂದ್ರನ್ ಕುಂದಲಮೂಲ, ಕೃಷ್ಣದಾಸ್, ರಾಮಕೃಷ್ಣನ್, ಕೇಶವ ಬಿ., ಲೀಲಾವತಿ ಪಟ್ಟಾಜೆ, ನಿಜೀಶ್ ಪಟ್ಟಾಜೆ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದರು.
ಸಭೆಯಲ್ಲಿ ಸಂಘಟನಾ ಬಲವರ್ಧನೆ, ಜನಪರ ಕಾರ್ಯಕ್ರಮಗಳ ರೂಪುರೇಷೆ ಹಾಗೂ ಮುಂಬರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

0 Comments