ಸಾಂದರ್ಭಿಕ ಚಿತ್ರ
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತು ಹಾಗೂ ಕುಟುಂಬಶ್ರೀ ಮೋಡೆಲ್ ಸಿ.ಡಿ.ಎಸ್.ಆಶ್ರಯದಲ್ಲಿ ಕೆಸರುಗದ್ದೆ ಕಾರ್ಯಕ್ರಮ ನಾಳೆ (ಜುಲೈ 22 ಬುದವಾರ) ಪಳ್ಳತ್ತಡ್ಕದಲ್ಲಿ ಜರಗಲಿರುವುದು. ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ಸುರೇಶ್ ಭಟ್ ಅವರ ಗದ್ದೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬೆಳಗ್ಗೆ 9.30 ಕ್ಕೆ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ. ಉದ್ಘಾಟಿಸುವರು. ಗ್ರಾಮ ಪಂಚಾಯತು ಸದಸ್ಯೆ ಉಷ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸುವರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ.ಕೆ.ಎಂ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಜನಿ ಸಂದೀಪ್, ಹಮೀದ್ ಕೆಡೆಂಜಿ, ಅವಿನಾಶ್.ವಿ.ರೈ, ಜಿಲ್ಲಾ ಪಂಚಾಯತು ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಸದಸ್ಯರುಗಳಾದ ಮೊಯ್ದು ಎಂ.ಎಸ್, ಮಹೇಶ್ ವಳಕುಂಜ, ಖಾದರ್ ಮಾನ್ಯ, ಸಿಡಿಎಸ್ ಅಧ್ಯಕ್ಷೆ ಸುಲೋಚನ, ಉಪಾಧ್ಯಕ್ಷೆ ಜಯಂತಿ, ಗ್ರಾಮ ಪಂಚಾಯತು ಸದಸ್ಯರುಗಳು, ಕುಟುಂಬಶ್ರೀ ಅಧಿಕಾರಿಗಳು, ವಿವಿಧ ಕುಟುಂಬಶ್ರೀ, ಸಿಡಿಎಸ್, ಎಡಿಎಸ್ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸುವರು. ಅನಂತರ ಕುಟುಂಬಶ್ರೀ ಸದಸ್ಯೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಾಯಂಕಾಲ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ, ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

0 Comments