Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೇರಳ ವಿದ್ಯಾರ್ಥಿನಿ ಸವರಿಯಾ ಹತ್ಯೆ ಪ್ರಕರಣ : ಮರು ಮರಣೋತ್ತರ ಪರೀಕ್ಷಾ ವರದಿಯಲ್ಲೂ ಮೆದುಳಿನ ರಕ್ತಸ್ರಾವವೇ ಸಾವಿಗೆ ಕಾರಣ


ಆಲಪ್ಪುಳ : ಉಜ್ಬೇಕಿಸ್ತಾನದಲ್ಲಿ ಹತ್ಯೆಗೀಡಾದ ಕೇರಳದ ವೈದ್ಯಕೀಯ ವಿದ್ಯಾರ್ಥಿನಿ ಸವರಿಯಾ (22) ಅವರ ಮರು ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಮೊದಲ ವರದಿಯಂತೆಯೇ ಮೆದುಳಿನ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ವರದಿಯ  ಪ್ರಕಾರ, ಸವರಿಯಾ ಅವರ ತಲೆಯ ಹಿಂಭಾಗದಲ್ಲಿ ಎರಡು ಬಾರಿ ಬಲವಾಗಿ ಹೊಡೆದ ಗುರುತುಗಳಿದ್ದು, ಬೆನ್ನೆಲುಬಿಗೂ ಗಾಯಗಳಾಗಿವೆ. ದೇಹದ ಹೊರಭಾಗ ಹಾಗೂ ಹೊಟ್ಟೆಯ ಮೇಲೂ ಒದ್ದಾಡಿದ ಗುರುತುಗಳು ಪತ್ತೆಯಾಗಿವೆ. ಆಂತರಿಕ ಅಂಗಾಂಗಗಳನ್ನು ಹೆಚ್ಚಿನ ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಬಂದ ಬಳಿಕ ಅಂತಿಮ ಮರಣೋತ್ತರ ಪರೀಕ್ಷಾ ವರದಿ ಪ್ರಕಟವಾಗಲಿದೆ.

ಕುಟುಂಬದ ಮನವಿಯ ಮೇರೆಗೆ ಆಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಇಂದು ಸವರಿಯಾ ಅವರ ಪೋಷಕರು ಹಾಗೂ ಉಜ್ಬೇಕಿಸ್ತಾನಕ್ಕೆ ತೆರಳಿದ್ದ ಸಂಬಂಧಿಕರ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಆದರೆ, ಪ್ರಕರಣದಲ್ಲಿ ನೇರ ಸಾಕ್ಷಿದಾರರಿಲ್ಲ ಎಂದು ಬುಖಾರಾ ಪೊಲೀಸರು ತಿಳಿಸಿದ್ದಾರೆ.

ಜುಲೈ 3ರಂದು ಉಜ್ಬೇಕಿಸ್ತಾನದ ಬುಖಾರಾ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಹರಿಪಾಡ್ ಮೂಲದ ಸವರಿಯಾ ಅವರನ್ನು ಕಾಲೇಜು ವಸತಿ ನಿಲಯದಲ್ಲೇ ಹತ್ಯೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಮಲಪ್ಪುರಂ ಜಿಲ್ಲೆಯ ಪೆರಿಂತಲ್ಮಣ್ಣ ಮೂಲದ ಸದರುಲ್ ಅನಂ (23) ಎಂಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆರೋಪಿಯು ಈ ಹಿಂದೆಯೂ ಸವರಿಯಾ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಸಹಪಾಠಿಗಳೂ ಇದೇ ಕುರಿತು ಬುಖಾರಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಆರಂಭದಲ್ಲಿ ಸವರಿಯಾ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಹೇಳಿ ಆರೋಪಿಯೇ ಆಸ್ಪತ್ರೆಗೆ ಕರೆದೊಯ್ದಿದ್ದ. ಬಳಿಕ ತನಿಖೆಯಲ್ಲಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಉಜ್ಬೇಕಿಸ್ತಾನ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಒಪ್ಪಂದದ ಪ್ರಕಾರ, ಆರೋಪಿಯೂ ಮತ್ತು ಮೃತ ವಿದ್ಯಾರ್ಥಿನಿಯೂ ಭಾರತೀಯರಾಗಿರುವುದರಿಂದ ಪ್ರಕರಣವನ್ನು ಭಾರತಕ್ಕೆ ವರ್ಗಾಯಿಸಲು ಮನವಿ ಸಲ್ಲಿಸುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ಸೇರಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳು ಭಾರತದಲ್ಲೇ, ವಿಶೇಷವಾಗಿ ಕೇರಳದಲ್ಲಿ ನಡೆಯುವ ಸಾಧ್ಯತೆ ಇದೆ. ಆರೋಪಿಯ ಕುಟುಂಬವೂ ವಿಚಾರಣೆಯನ್ನು ಕೇರಳದಲ್ಲೇ ನಡೆಸುವಂತೆ ಆಗ್ರಹಿಸಿದೆ.

Post a Comment

0 Comments

ಜಾಹೀರಾತು

Responsive Advertisement