ಬೆಂಗಳೂರು : ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಕೆ.ಜಮುನಾ ರಾಣಿ (88) ನಿಧನರಾದರು. ನಿನ್ನೆ ಬೆಂಗಳೂರಿನ ವೃದ್ಧಾಶ್ರಮದಲ್ಲಿ ಬೆಳಗಿನ ಜಾವ ಸುಮಾರು 5:30ಕ್ಕೆ ಇವರು ಇಹಲೋಕ ತ್ಯಜಿಸಿದರು. ಮೂಲತಃ ಆಂಧ್ರ ಪ್ರದೇಶದವರಾದ ಜಮುನಾ ರಾಣಿ ತಮ್ಮ ಜೀವನದ ಬಹುಪಾಲು ಸಮಯವನ್ನು ಸಂಗೀತಕ್ಕೆ ಮುಡಿಪಾಗಿಟ್ಟಿದ್ದರು.
ಜಮುನಾ ರಾಣಿ ಅವರು ತಮ್ಮ 7ನೇ ವಯಸ್ಸಿನಲ್ಲಿ ತೆಲುಗು ಚಲನಚಿತ್ರ 'ತ್ಯಾಗಯ್ಯ' ಮೂಲಕ ತಮ್ಮ ಹಿನ್ನೆಲೆ ಗಾಯನ ಪ್ರಾರಂಭಿಸಿದರು. ಸ್ಕೂಲ್ ಮಾಸ್ಟರ್ ಚಿತ್ರದ "ಅತಿ ಮಧುರ ಅನುರಾಗ" ಎಂಬ ಹಿಟ್ ಹಾಡಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು, ರತ್ನಮಂಜರಿಯಲ್ಲಿನ "ಯಾರು ಯಾರು ನೀ ಯಾರು" ಎಂಬ ಎವರ್ ಗ್ರೀನ್ ಹಾಡಿನ ಮೂಲಕ ಸಂಗೀತ ಪ್ರೇಮಿಗಳ ಮನ ಸೆಳೆದರು.
ಭಾರತದ ಬಹುಭಾಷೆಗಳಲ್ಲದೇ ಶ್ರೀಲಂಕಾದ ಸಿನಿಮಾಗಳಲ್ಲಿಯೂ ಹಾಡಿದರು. ಆನಂದ ಸಮರಕೂನ್ ಅವರ ಸಂಗೀತ ನಿರ್ದೇಶನದಲ್ಲಿ 'ಸುಜಾತಾ' (1953) ಚಿತ್ರಕ್ಕಾಗಿ ಹಾಡುಗಳನ್ನು ಹಾಡಿದರು. ಕಲ್ಯಾಣಿ (1952) ಚಿತ್ರದ "ಒನ್ನು ರೆಂಡು ಮೂನು" ಮತ್ತು "ಸಕ್ಸಸ್ ಸಕ್ಸಸ್" ಎಂಬ ಹಾಡುಗಳೊಂದಿಗೆ ತಮಿಳು ಹಿನ್ನೆಲೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು. ಇದು ಅವರನ್ನು ತಮಿಳು ಚಿತ್ರರಂಗದಲ್ಲಿ ಭದ್ರ ಸ್ಥಾನ ಗಿಟ್ಟಿಸಿಕೊಳ್ಳಲು ಸಹಾಯವಾಯಿತು. ದಶಕಗಳಲ್ಲಿ ಅವರು "ಓ ದೇವದಾಸ್" (ದೇವದಾಸ್, 1953), "ಆಸೈಯುಂ ನೇಸಮುಮ್" (ಗುಲೇಬಕಾವಲಿ, 1955), "ಯಾರದಿ ನೀ ಮೋಹಿನಿ", ''ನಾನ್ ಸಿರಿತಲ್ ದೀಪಾವಳಿ'' ಸೇರಿದಂತೆ ಹಲವಾರು ಸ್ಮರಣೀಯ ಹಾಡುಗಳನ್ನು ಹಾಡಿದ್ದಾರೆ.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments