ಮಧೂರು: ಹಿರಿಯ ನಾಗರಿಕರಿಗೆ ಹಾಗೂ ದಿವ್ಯಾಂಗರಿಗೆ ಉಚಿತವಾಗಿ ಸಹಾಯೋಪಕರಣಗಳನ್ನು ವಿತರಿಸುವ ಕೇಂದ್ರ ಸರ್ಕಾರದ 'ರಾಷ್ಟ್ರೀಯ ವಯೋಶ್ರೀ ಯೋಜನೆ'ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಪ್ರಧಾನಮಂತ್ರಿ ದಿವ್ಯಾಂಗ ಕೇಂದ್ರ ಹಾಗೂ ವಿಕಸಿತ ಕೇರಳ ಕಾಸರಗೋಡು ಜಿಲ್ಲಾ ಹೆಲ್ಪ್‌ಡೆಸ್ಕ್‌ನ ಜಂಟಿ ಆಶ್ರಯದಲ್ಲಿ ಉಳಿಯತ್ತಡ್ಕದ ಅಟಲ್ ಜಿ ಕಮ್ಯೂನಿಟಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಶಿಬಿರವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು.
ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಉಚಿತವಾಗಿ ಸಹಾಯೋಪಕರಣಗಳನ್ನು ನೀಡುವ ಈ ಯೋಜನೆಯು, ದೇಶದ ಜನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗಿರುವ ಕಾಳಜಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಅಶ್ವಿನಿ ತಿಳಿಸಿದರು. ಬಿಜೆಪಿ ಮಧೂರು ಈಸ್ಟ್ ಏರಿಯಾ ಸಮಿತಿ ಅಧ್ಯಕ್ಷ ಮಹೇಶ್ ಮಧೂರು ಅಧ್ಯಕ್ಷತೆ ವಹಿಸಿದ್ದರು. ದಿವ್ಯಾಂಗ ಕೇಂದ್ರವನ್ನು ಪ್ರತಿನಿಧಿಸಿ ಡಾ. ಗೋಕುಲ್, ಅಭಿನವ್, ಆಡಿಯಾಲಜಿಸ್ಟ್ ಡಾ. ಮಧುಶ್ರೀ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶಾನ್‌ಭಾಗ್, ಉಪಾಧ್ಯಕ್ಷ ಭಾನುಪ್ರಕಾಶ್, ಮಧೂರು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಪ್ರತಿನಿಧಿ ಪ್ರಮೀಳಾ ಮಜಲ್, ಮಧೂರು ಈಸ್ಟ್ ಏರಿಯಾ ಪ್ರಧಾನ ಕಾರ್ಯದರ್ಶಿ ಅನಿಲ್ ಪಕ್ಕಳ ಮೊದಲಾದವರು ಮಾತನಾಡಿದರು.
.jpeg)
0 Comments