Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲದಲ್ಲಿ ಜನಜಾಗೃತಿ ಮೂಡಿಸಿದ ಬೀದಿ ನಾಟಕ : ಮಾದಕ ವ್ಯಸನ, ನೀರು ಸಂರಕ್ಷಣೆ ಕುರಿತು ಅರಿವು

ಕಾಸರಗೋಡು : ಪೆರ್ಲ ವಲಯದ 'ಕಪಿಲ ಜ್ಞಾನವಿಕಾಸ ಕೇಂದ್ರ'ದ ಆಶ್ರಯದಲ್ಲಿ ಸಾರ್ವಜನಿಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಬೀದಿ ನಾಟಕ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಜನಜಾಗೃತಿ ಅಧ್ಯಕ್ಷ ಬಿ.ಪಿ. ಶ್ರೇಣಿ ಉದ್ಘಾಟಿಸಿದರು. 'ಸಂಸಾರ ಕಲಾತಂಡ ಜೋಡುಮಾರ್ಗ ಬಂಟ್ವಾಳ'ದ ಕಲಾವಿದರು ರೂಪಕಗಳ ಮೂಲಕ ನೀರಿನ ಮಿತವ್ಯಯದ ಬಳಕೆ, ಮಾದಕ ವಸ್ತುಗಳ ದುಷ್ಪರಿಣಾಮ, ಹೆಲ್ಮೆಟ್ ಧರಿಸುವ ಅಗತ್ಯತೆ, ಮೊಬೈಲ್ ಬಳಕೆಯ ಅತಿರೇಕದಿಂದ ಉಂಟಾಗುವ ಸಮಸ್ಯೆಗಳು ಹಾಗೂ ಮಧುಮೇಹ, ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ  ಎಸ್‌ಐ ಸುಕುಮಾರ್ ಭಾಗವಹಿಸಿ, ಡ್ರಗ್ಸ್ ಮತ್ತು ಇತರ ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಅಪಾಯಗಳು ಹಾಗೂ ಅವುಗಳನ್ನು ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಶೌರ್ಯ ಘಟಕದ ಸದಸ್ಯರು, ಒಕ್ಕೂಟದ ಸದಸ್ಯರು ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement