Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೆಳೆಯರ ಬಳಗದಿಂದ ಸನ್ಮಾನ


ಪಳ್ಳತಡ್ಕ: ಬದಿಯಡ್ಕ ಗ್ರಾಮ ಪಂಚಾಯತ್‌ನ 8ನೇ ವಾರ್ಡ್ ಗೆಳೆಯರ ಬಳಗದ ವತಿಯಿಂದ ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಪಳ್ಳತಡ್ಕದ ಮುದ್ದು ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ 8ನೇ ವಾರ್ಡ್ ಸದಸ್ಯೆ ಉಷಾ ರಾಮ ಪಳ್ಳತಡ್ಕ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಪಳ್ಳತಡ್ಕ ಎಯುಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮಲ್ಲಿಕಾ, ನಿವೃತ್ತ ಶಿಕ್ಷಕ ಅಬ್ದುಲ್ಲ ಕುಂಞಿ, ಮೊಹಮ್ಮದ್ ಕಾಡಮನೆ, ಪಳ್ಳತಡ್ಕ ಶಾಲೆಯ ಶಿಕ್ಷಕ ಗುರುಪ್ರಸಾದ್ ರೈ, 9ನೇ ವಾರ್ಡ್ ಸದಸ್ಯ ಮಧುಸೂಧನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಿಡಿಎಸ್ ಸದಸ್ಯೆ ಮಮತಾ, ಎಡಿಎಸ್ ಕಾರ್ಯದರ್ಶಿ ವನಿತಾ ಹಾಗೂ ಎಡಿಎಸ್ ಉಪಾಧ್ಯಕ್ಷೆ ನಸೀರಾ, ಆಶಾ ಕಾರ್ಯಕರ್ತೆ ಸಾಜಿದಾ ಉಪಸ್ಥಿತರಿದ್ದರು. ತುಳಸಿ ಪಳ್ಳತಡ್ಕ ಸ್ವಾಗತಿಸಿ, ಸುನೀತಾ ಮುಚ್ಚಿರಕವೆ ವಂದಿಸಿದರು. ಕಾರ್ಯಕ್ರಮದ ಯಶಸ್ವಿಗೆ ಸುನಿಲ್ ಬಣ್ಪುತ್ತಡ್ಕ, ಚಂದ್ರ ಪಳ್ಳತಡ್ಕ, ರಾಮ ಪಳ್ಳತಡ್ಕ, ಫಾರೂಕ್ ಪಳ್ಳತಡ್ಕ ಹಾಗೂ ಭಾಸ್ಕರ ಕಾರ್ಯಾಡ್ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ನೇತೃತ್ವ ವಹಿಸಿದರು.

Post a Comment

0 Comments

ಜಾಹೀರಾತು

Responsive Advertisement