Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತೀರ್ಪು ತನ್ನ ಪರವಾಗಲು ನ್ಯಾಯಾಧೀಶರ ಆಸನಕ್ಕೆ ಮಾಟಮಂತ್ರದ ವಾಮಚಾರಗೈದ ಮಹಿಳೆ ಬಂಧನ

ಚಿಕ್ಕಬಳ್ಳಾಪುರ : ಸಿವಿಲ್ ಪ್ರಕರಣದಲ್ಲಿ ತನ್ನ ಪರ ತೀರ್ಪು ಬರಲೆಂಬ ಉದ್ದೇಶದಿಂದ ಮಹಿಳಾ ನ್ಯಾಯಾಧೀಶರ ಆಸನದ ಮೇಲೆ ಮಾಟಮಂತ್ರ ಮಾಡಿದ್ದ ಆರೋಪದಡಿ 65 ವರ್ಷದ ಮಹಿಳೆಯನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಂಧಿತೆ ಚಿಕ್ಕಬಳ್ಳಾಪುರ ನಗರದ ವಲಸಣ್ಣ ಬೀದಿ ನಿವಾಸಿ ಮಂಜುಳಾ (65) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಆಸನದ ಮೇಲೆ ಮಂತ್ರಿಸಿದ ಬಿಳಿ ಸಾಸಿವೆ ಕಾಳುಗಳನ್ನು ಚೆಲ್ಲಿ ಮಾಟಮಂತ್ರ ನಡೆಸಿದ್ದರು ಎನ್ನಲಾಗಿದೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ನ್ಯಾಯಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.

ನ್ಯಾಯಾಲಯದ ಆವರಣದಲ್ಲೇ ನಡೆದ ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮೂಢನಂಬಿಕೆಯ ಮೂಲಕ ನ್ಯಾಯಾಂಗದ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಯತ್ನ ಮಾಡಿದ ಆರೋಪ ಇದೀಗ ಕಾನೂನು ಕ್ರಮಕ್ಕೆ ಕಾರಣವಾಗಿದೆ.

Post a Comment

0 Comments

ಜಾಹೀರಾತು

Responsive Advertisement