ಬದಿಯಡ್ಕ : ಶೇಣಿ ಸಮೀಪದ ಏಳ್ಕಾನ ಎಂಬಲ್ಲಿರುವ ರಬ್ಬರ್ ಶೀಟ್ ತಯಾರಿಕಾ ಘಟಕದಿಂದ ರಬ್ಬರ್ ರೋಲರ್ ಯಂತ್ರ ಕಳವು ಮಾಡಿದ ಪ್ರಕರಣದಲ್ಲಿ 19 ವರ್ಷದ ಯುವಕನೋರ್ವನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪುತ್ತಿಗೆ ಗ್ರಾಮದ ಬಾಡೂರು ಪಳ್ಳಂ ಕೋಟೆ ಹೌಸ್ ನ ನಿವಾಸಿ ಮೊಹಮ್ಮದ್ ಇಶಾಖ್ (19)ಎಂದು ಗುರುತಿಸಲಾಗಿದೆ. ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಪಿ. ಅನೂಪ್ ಕೃಷ್ಣನ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಪ್ರಕರಣದ ತನಿಖೆಯ ಪ್ರಕಾರ, ಇಬ್ಬರು ಅಪ್ರಾಪ್ತರ ಸಹಾಯದಿಂದ ಸುಮಾರು 600 ಕೆಜಿ ತೂಕದ ರಬ್ಬರ್ ರೋಲರ್ ಯಂತ್ರವನ್ನು ಕಳವುಗೈಯಲಾಗಿದೆ ಎಂದು ಪೋಲಿಸರು ತಿಳಿಸಿದ್ದಾನೆ..
ಕನ್ನಟಿಕ್ಕಾನ ನಿವಾಸಿ ಸೋಜನ್ ಜಾರ್ಜ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜೂನ್ 22ರಿಂದ 28ರ ನಡುವೆ ಏಳ್ಕಾನದಲ್ಲಿದ್ದ ಪಿ.ವಿ. ರಬ್ಬರ್ಸ್ ಸಂಸ್ಥೆಯಲ್ಲಿ ಕಳವು ನಡೆದಿದ್ದು, ತನಿಖೆ ನಡೆಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಿರತರಾಗಿದ್ದಾರೆ.

0 Comments