ಕಾಸರಗೋಡು : ನಿವೃತ್ತ ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ. ಯು.ಬಿ. ಕುಣಿಕುಳ್ಳಾಯ (89) ಅವರು ನಿಧನರಾಗಿದ್ದಾರೆ. ಕಾಞಂಗಾಡ್‌ನ ಕುನ್ನುಮ್ಮಲ್‌ನಲ್ಲಿ ವಾಸವಾಗಿದ್ದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅಲ್ಲದೆ, ಉಬ್ರಂಗಳ ಶಾಸ್ತಾರ ಮಹಾದೇವ ಪಾರ್ವತೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರ ಅಂತ್ಯಕ್ರಿಯೆಯು ಅವರ ಜನ್ಮಸ್ಥಳವಾದ ಬದಿಯಡ್ಕದ ಉಬ್ರಂಗಳದಲ್ಲಿರುವ ಪೂರ್ವಜರ ಮನೆಯ ಆವರಣದಲ್ಲಿ ನಡೆಯಲಿದೆ. ಅವರು ಪತ್ನಿ ಡಾ. ಯು. ಕೃಷ್ಣಕುಮಾರಿ, ಪುತ್ರಿ ಡಾ. ಸೀಮಾ ಹಾಗೂ ಪುತ್ರ ಡಾ. ರಾಘವೇಂದ್ರ ಪ್ರಸಾದ್ ಅವರನ್ನು ಅಗಲಿದ್ದಾರೆ. ಬಂಧು-ಬಳಗ, ಸ್ನೇಹಿತರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಅವರ ನಿಧನಕ್ಕೆ ವಿವಿಧ ವಲಯಗಳಿಂದ ಸಂತಾಪ ವ್ಯಕ್ತವಾಗಿದೆ.

0 Comments