ಮುಳ್ಳೇರಿಯ : ಬೆಳ್ಳೂರು ಪಂಚಾಯತಿನ ಬೈತಡ್ಕ ಉನ್ನತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ಬಾಬು ಸುಶೀಲ ದಂಪತಿಗಳ ಪುತ್ರ ಹರೀಶ (26) ಎಂದು ಗುರುತಿಸಲಾಗಿದೆ. ಮನೆ ಸಮೀಪದ ಹಲಸಿನ ಮರಕ್ಕೆ ನಿನ್ನೆ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

0 Comments