Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪ್ರವಾಸಿ ತಾಣ ರಾಣಿಪುರದಲ್ಲಿ ರೋಪ್‌ವೇಯಿಂದ ಬಿದ್ದು ಯುವಕ ದಾರುಣಾಂತ್ಯ


ಕಾಸರಗೋಡು: ಪ್ರವಾಸಿ ತಾಣ ರಾಣಿಪುರದಲ್ಲಿ ರೋಪ್‌ವೇಯಲ್ಲಿ ಸಂಭವಿಸಿದ ಅಪಘಾತದಲ್ಲಿ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ.ಮೃತರನ್ನು ಚಾಮುಂಡಿ ಮೂಲದ ಸನೂಪ್ ಕೃಷ್ಣನ್ ಎಂದು ಗುರುತಿಸಲಾಗಿದೆ.ಶನಿವಾರ ಸಂಜೆ ಈ ಅಪಘಾತ ಸಂಭವಿಸಿದೆ. ಸನೂಪ್ ರಾಣಿಪುರಂನಲ್ಲಿ ರೋಪ್‌ವೇ ಉದ್ಯೋಗಿಯಾಗಿದ್ದರು. ರೋಪ್‌ವೇಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವಾಗ ಸನೂಪ್ ಕೆಳಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ನಿನ್ನೆಯಷ್ಟೆ ಉದ್ಯೋಗಕ್ಕೆ ಸೇರ್ಪಡೆಗೊಂಡ ಸನೂಫ್ ನನ್ನು ವಿಧಿ ವಕ್ರ ದೃಷ್ಠಿಯಲ್ಲಿ ಕಾಡಿರುವುದು ಶೋಕ ವಾತವರಣ ಮೂಡಿಸಿದೆ.
ಸನೂಪ್ ಅವರ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಾಜಾಪುರ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪ್ರವಾಸ ಚಟುವಟಿಕೆಗೆ ನಿರ್ಬಂಧ ಹೇರಲಾಗಿದೆ.

Post a Comment

0 Comments

ಜಾಹೀರಾತು

Responsive Advertisement