Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಂಬಳೆಯಲ್ಲಿ ‘ಸಿ ಡ್ರೀಮ್ಸ್ ಮಿತ್ರ’ ಚೈಲ್ಡ್ ವೆಲ್‌ನೆಸ್ ಸೆಂಟರ್ ಕಾರ್ಯಾರಂಭ

ಕುಂಬಳೆ : ಮಕ್ಕಳ ಮಾನಸಿಕ ಹಾಗೂ ಸಾಮಾಜಿಕ ಕ್ಷೇಮ ಮತ್ತು ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ‘ಸಿ ಡ್ರೀಮ್ಸ್ ಮಿತ್ರ’ ಚೈಲ್ಡ್ ವೆಲ್‌ನೆಸ್ ಸೆಂಟರ್ ಕುಂಬಳೆಯಲ್ಲಿ ಕಾರ್ಯಾರಂಭಿಸಿದೆ. ಕುಂಬಳೆಯ ಭಾಗೀರಥಿ ಕಾಂಪ್ಲೆಕ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಕೇಂದ್ರವನ್ನು ಉದ್ಘಾಟಿಸಿದರು.

ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪ್, ಸಿಪಿಎಂ ಕುಂಬಳೆ ಏರಿಯಾ ಸಮಿತಿ ಕಾರ್ಯದರ್ಶಿ ಸಿ.ಎ. ಸುಬೈರ್, ಐಎನ್‌ಸಿ ಕುಂಬಳೆ ಮಂಡಲ ಅಧ್ಯಕ್ಷ ರವಿ ಪೂಜಾರಿ, ಬಿಜೆಪಿ ಕುಂಬಳೆ ಪಂಚಾಯತ್ ಅಧ್ಯಕ್ಷ ಸುಜಿತ್ ರೈ ಹಾಗೂ ನಿವೃತ್ತ ಶಿಕ್ಷಕಿ ಮತ್ತು ಕವಯಿತ್ರಿ ಶಶಿಕಲಾ ಅವರು ಶುಭ ಹಾರೈಸಿದರು.

ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಒತ್ತಡ ನಿರ್ವಹಣೆ, ಪೋಷಕರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಬೆಂಬಲ ನೀಡುವುದು ‘ಸಿ ಡ್ರೀಮ್ಸ್ ಮಿತ್ರ’ದ ಪ್ರಮುಖ ಉದ್ದೇಶಗಳಾಗಿವೆ. ಮಕ್ಕಳಿಗೆ ಸುರಕ್ಷಿತ ಹಾಗೂ ಸ್ನೇಹಪರ ವಾತಾವರಣದಲ್ಲಿ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಆತ್ಮವಿಶ್ವಾಸದಿಂದ ಬೆಳೆಯಲು ಅಗತ್ಯವಾದ ಬೆಂಬಲ ಒದಗಿಸುವುದು ಕೇಂದ್ರದ ಗುರಿಯಾಗಿದೆ.

‘ಸಿ ಡ್ರೀಮ್ಸ್ ಮಿತ್ರ’ದ ಚಟುವಟಿಕೆಗಳಿಗೆ ಮೈಂಡ್ ಪವರ್ ಟ್ರೈನರ್ ಹಾಗೂ ಲೈಫ್ ಕೋಚ್ ಜಯನ್ ಮಾಸ್ಟರ್ ನೀಲೇಶ್ವರ ನೇತೃತ್ವ ವಹಿಸಿದ್ದಾರೆ. ನಿವೃತ್ತ ಶಿಕ್ಷಕರಾಗಿರುವ ಅವರು ಮಕ್ಕಳ ಮನಸ್ಸನ್ನು ಹತ್ತಿರದಿಂದ ಅರಿತುಕೊಂಡು, ಅವರ ಪ್ರತಿಭೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ತರಬೇತಿ ನೀಡುತ್ತಿರುವ ಜಯನ್ ಮಾಸ್ಟರ್ ಅವರ ನೇತೃತ್ವದಲ್ಲಿ ಕುಂಬಳೆಯ ಈ ಹೊಸ ಯೋಜನೆ ಮುಂದುವರಿಯಲಿದೆ.

ಸಿ ಡ್ರೀಮ್ಸ್ ಎಂ.ಎಂ. ಅಕಾಡೆಮಿಯ ನೇತೃತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಸೃಜನಶೀಲ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಮ್ಯಾಜಿಕ್ ಮತ್ತು ಮೆಂಟಲಿಸಂ, ಮೇಕಪ್ ಮತ್ತು ಬ್ಯೂಟಿ, ಹಿಪ್ನಾಟಿಸಂ, ಎಲೊಕ್ಯೂಷನ್ ಮತ್ತು ಕಮ್ಯುನಿಕೇಶನ್, ಗೋಲ್ ಸೆಟ್ಟಿಂಗ್ ಮಾಸ್ಟರಿ, ಕ್ರಿಯೇಟಿವ್ ಮತ್ತು ಆರ್ಟ್ ಪ್ರೋಗ್ರಾಂ, ಅಭಿನಯ ಸೇರಿದಂತೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಅಕಾಡೆಮಿ ಆಯೋಜಿಸಲಿದೆ.

ಪಿಎಸ್‌ಸಿ ಕೋಚಿಂಗ್ ತರಗತಿಗಳನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ‘ಹ್ಯೂಮನ್ ಲೈಬ್ರರಿ’ ಯೋಜನೆಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು.

ಮಕ್ಕಳ ಕ್ಷೇಮ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುವ ಈ ಹೊಸ ಉಪಕ್ರಮವು ಕುಂಬಳೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳು ಮತ್ತು ಪೋಷಕರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Post a Comment

0 Comments

ಜಾಹೀರಾತು

Responsive Advertisement