ಕಾರಡ್ಕ : ಜಿವಿಎಚ್‌ಎಸ್‌ಎಸ್ ಕಾರಡ್ಕದ 2006ರ ವಿಎಚ್ಎಸ್ಇ ಬ್ಯಾಚ್‌ನ ವಿದ್ಯಾರ್ಥಿಗಳು ಹಲವು ವರ್ಷಗಳ ಬಳಿಕ ಮತ್ತೆ ತಮ್ಮ ಹಳೆಯ ಶಾಲೆಯಲ್ಲಿ ಭೇಟಿಯಾಗಿ ಹಳೆಯ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಪುನರ್ಮಿಲನದ ಅಂಗವಾಗಿ ಬ್ಯಾಚ್‌ನ ಸದಸ್ಯರ ಮಕ್ಕಳಲ್ಲಿ ಈ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಎಲ್‌ಎಸ್‌ಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಬ್ಯಾಚ್‌ನ ಸದಸ್ಯರಾಗಿರುವ ಸ್ವಯಂ ರಕ್ಷಣಾ ತರಬೇತುದಾರರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಓಣಂ ಆಚರಣೆ ಹಾಗೂ ಸ್ನೇಹಭೋಜನವನ್ನೂ ಆಯೋಜಿಸಲಾಗಿತ್ತು.
ಹಳೆಯ ಶಾಲೆಯ ಆವರಣದಲ್ಲಿ ನಡೆದ ಈ ಸ್ನೇಹಸಂಗಮವು ಎಲ್ಲರಲ್ಲೂ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು. ಮುಂದಿನ ವರ್ಷ ಇನ್ನಷ್ಟು ಅದ್ದೂರಿಯಾಗಿ ಪುನರ್ಮಿಲನ ನಡೆಸಲು ನಿರ್ಧರಿಸಲಾಯಿತು.
.png)
0 Comments