ನವದೆಹಲಿ : ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ಹಾಗೂ ಹಿರಿಯ ವೈದ್ಯ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ ಮಲ್ಲಿಕಾರ್ಜುನ ಎಸ್ ನಾಸಿಯವರು ದೆಹಲಿಯ ಗ್ಲೋಬಲ್ ಅಚೀವ್ಮೆಂಟ್ ಕೌನ್ಸಿಲ್ ನೀಡುವ ಪ್ರತಿಷ್ಠಿತ ಗ್ಲೋಬಲ್ ಐಕಾನಿಕ್ ಅಚೀವ್ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು
ನವದೆಹಲಿಯಲ್ಲಿ ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ಆಯೋಜಿಸಿದ ಗ್ಲೋರಿ ಆಫ್ ಇಂಡಿಯಾ ಅವಾರ್ಡ್ - 2026 ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಛತ್ತಿಸ್ ಗಡ್ ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವ ತೊಖನ್ ಸಾಹು ಪ್ರಶಸ್ತಿ ಪ್ರದಾನಗೈದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಹಿಂದಿ ಸಲಹಾ ಸಮಿತಿ ಸದಸ್ಯೆ ವೈಶಾಲಿ ತೊಮರ್. ಡಾ ಜಿ ಶಿವಬಾಲ ಮುರುಗನ್. ಡಾ ಶೈಜು ಡೊಲ್ಪಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ಸಮಾಜ ಸೇವೆ ಹಾಗೂ ನಾಯಕತ್ವ. ಆರೋಗ್ಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಮೂಲತಃ ಕಲಬುರ್ಗಿ ಜಿಲ್ಲೆಯವರಾದ ನಾಸಿಯವರು ಇಲ್ಲಿನ ಎಸ್ ಬಿ ಆರ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಎಂ ಆರ್ ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಪೂರೈಸಿ 2004ರಲ್ಲಿ ಕೇರಳದ ಕೊಚ್ಚಿ ಗೆ ಆಗಮಿಸಿದರು. 2016ರಲ್ಲಿ ಪೋತನಿಕ್ಕಾಡ್ ನಲ್ಲಿ ಸೇಂಟ್ ಮೇರಿಸ್ ಎಂಬ ಆಸ್ಪತ್ರೆಯನ್ನು ತೆರೆದು ಇಲ್ಲಿ ಜನಾನುರಾಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಪ್ರದೇಶದಲ್ಲಿರುವ ಕನ್ನಡ ಭಾಷಿಗರನ್ನುಒಗ್ಗೂಡಿಸಿ ಅವರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಕಲೆಗಳನ್ನು ಬೆಳೆಸಲು ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ, ಕನ್ನಡ ಮತ್ತು ಮಲಯಾಳ ಭಾಷಾ ಸೌಹಾರ್ದತೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ
ಇವರ ಕನ್ನಡಪರ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಮುಂಬೈನಲ್ಲಿ ನಡೆದ ಹೊರನಾಡ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕೇರಳದ ಅನೇಕ ಸಂಘ ಸಂಸ್ಥೆಗಳು ಇವರ ಜನಪರ ಸೇವೆಯನ್ನು ಗುರುತಿಸಿ ಗೌರವಿಸಿವೆ. ಇತ್ತೀಚಿಗೆ ಕೇರಳದ ರಾಜಧಾನಿ ತಿರುವನಂತಪುರದ ಭಾರತ್ ಭವನದಲ್ಲಿ ನಡೆದ ಅನಂತಪುರಿ ಗಡಿನಾಡ ಕನ್ನಡ ಉತ್ಸವದಲ್ಲಿ ಇವರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

0 Comments