Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹಿಂದೂ ದೇವರ ಅವಹೇಳನ: ಸನ್ನಿ ಎಂ. ಕಾಪಿಕೋಡ್ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು


ಕುಂಬಳೆ : ಹಿಂದೂ ಧರ್ಮದ ದೇವರಾದ ಶಬರಿಮಲೆ ಶ್ರೀ ಅಯ್ಯಪ್ಪ ಹಾಗೂ ಮಾಳಿಗಪುರತ್ತಮ್ಮ ದೇವಿಯನ್ನು ಅವಹೇಳನ ಮಾಡಿದ ಸನ್ನಿ ಎಂ. ಕಾಪಿಕೋಡ್ ಅವರ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ದೂರು ನೀಡಲಾಯಿತು.

ತಿರುವೂರು ತುಜನ್‌ಪರಂಬದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸನ್ನಿ ಎಂ. ಅವರು ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದುದರಿಂದ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ತುಂಬಾ ನೋವು ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮಪ್ರಸಾರ ಪ್ರಮುಖರಾದ ಸುರೇಶ್ ಶೆಟ್ಟಿ ಪರಂಕಿಲ ಅವರು ಒತ್ತಾಯಿಸಿ ಮನವಿ ನೀಡಿದರು.

ತಂಡದಲ್ಲಿ ಮಂಗಲ್ಪಾಡಿ ಪಂಚಾಯತ್ ಸದಸ್ಯರಾದ ಶಮಂತ್ ಶೆಟ್ಟಿ, ಎಚ್. ಕೆ. ಶೆಟ್ಟಿ, ಪ್ರವೀಣ್ ಕುಮಾರ್, ಹರಿನಾಥ್ ಭಂಡಾರಿ ಒಡ್ಡಂಬೆಟ್ಟು, ಬಾಲಕೃಷ್ಣ ಅಂಬಾರು, ಕಿಶೋರ್ ಭಗವತಿ ಮೊದಲಾದವರು ಜೊತೆಯಾಗಿದ್ದರು.

Post a Comment

0 Comments

ಜಾಹೀರಾತು

Responsive Advertisement