Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಂಬಳೆ ಪ್ರೆಸ್ ಫೋರಂನಿಂದ ಓಣಂ ಆಚರಣೆ

ಕುಂಬಳೆ: ಕುಂಬಳೆ ಪ್ರೆಸ್ ಫೋರಂನ ನೇತೃತ್ವದಲ್ಲಿ ‘ಮಾಧ್ಯಮ ಓಣಂ’ ಹೆಸರಿನಲ್ಲಿ ಓಣಂ ಆಚರಣೆಯನ್ನು ಆಯೋಜಿಸಲಾಯಿತು. ಪತ್ರಕರ್ತರು ಹಾಗೂ ಕುಟುಂಬ ಸದಸ್ಯರ ಸಮಾವೇಶಕ್ಕೆ ವೇದಿಕೆಯಾದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಓಣಂ ಸದ್ಯವನ್ನು ಆಯೋಜಿಸಲಾಗಿತ್ತು.

ಸದಸ್ಯರ ಕುಟುಂಬಗಳ ಮಕ್ಕಳಿಗಾಗಿ ಸಂಗೀತ ಕುರ್ಚಿ, ಬಲೂನ್ ಒಡೆಯುವುದು ಹಾಗೂ ಓಣಂ ಹಾಡು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರೆಸ್ ಫೋರಂ ಸದಸ್ಯರಿಗೆ ಓಣಂ ಉಡುಗೊರೆಗಳನ್ನು ಯುವ ಉದ್ಯಮಿ ಅಶ್ರಫ್ ಸ್ಕೈಲರ್ ವಿತರಿಸಿದರು.

ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಓಣಂ ಸಹೋದರತ್ವ ಮತ್ತು ಏಕತೆಯ ಸಂದೇಶವನ್ನು ಸಾರುವ ಹಬ್ಬವಾಗಿದ್ದು, ಇಂತಹ ಕೂಟಗಳು ಸಮುದಾಯದಲ್ಲಿ ಸ್ನೇಹವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

ಪ್ರೆಸ್ ಫೋರಂ ಅಧ್ಯಕ್ಷ ಅಬ್ದುಲ್ಲ ಕುಂಬಳೆ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕುಂಬಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸುಫ್ ಮುಖ್ಯ ಅತಿಥಿಯಾಗಿದ್ದರು.

ಉಪಾಧ್ಯಕ್ಷ ಪುರುಷೋತ್ತಮ ಭಟ್, ಸದಸ್ಯರಾದ ಅಬ್ದುಲ್ ಲತೀಫ್ ಉಳುವಾರ್, ರಶೀದ್ ಬಂದ್ಯೋಡು, ಕೆ.ಎಂ. ಸತ್ತಾರ್, ಧನರಾಜ್ ಉಪ್ಪಳ, ತಾಹಿರ್ ಉಪ್ಪಳ, ಸುಬೈರ್ ಕುಕ್ಕಾರ್, ಝೈನುದ್ದೀನ್ ಅಡ್ಕ ಹಾಗೂ ಕೋಶಾಧಿಕಾರಿ ಅಬ್ದುಲ್ ಲತೀಫ್ ಕುಂಬಳೆ ಮಾತನಾಡಿದರು.

ಪ್ರೆಸ್ ಫೋರಂ ಕಾರ್ಯದರ್ಶಿ ಐ. ಮುಹಮ್ಮದ್ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಎಂ. ಸತ್ತಾರ್ ವಂದಿಸಿದರು.ನಿಂದ ಓಣಂ ಆಚರಣೆ

ಕುಂಬಳೆ: ಕುಂಬಳೆ ಪ್ರೆಸ್ ಫೋರಂನ ನೇತೃತ್ವದಲ್ಲಿ ‘ಮಾಧ್ಯಮ ಓಣಂ’ ಹೆಸರಿನಲ್ಲಿ ಓಣಂ ಆಚರಣೆಯನ್ನು ಆಯೋಜಿಸಲಾಯಿತು. ಪತ್ರಕರ್ತರು ಹಾಗೂ ಕುಟುಂಬ ಸದಸ್ಯರ ಸಮಾವೇಶಕ್ಕೆ ವೇದಿಕೆಯಾದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಓಣಂ ಸದ್ಯವನ್ನು ಆಯೋಜಿಸಲಾಗಿತ್ತು.

ಸದಸ್ಯರ ಕುಟುಂಬಗಳ ಮಕ್ಕಳಿಗಾಗಿ ಸಂಗೀತ ಕುರ್ಚಿ, ಬಲೂನ್ ಒಡೆಯುವುದು ಹಾಗೂ ಓಣಂ ಹಾಡು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರೆಸ್ ಫೋರಂ ಸದಸ್ಯರಿಗೆ ಓಣಂ ಉಡುಗೊರೆಗಳನ್ನು ಯುವ ಉದ್ಯಮಿ ಅಶ್ರಫ್ ಸ್ಕೈಲರ್ ವಿತರಿಸಿದರು.

ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಓಣಂ ಸಹೋದರತ್ವ ಮತ್ತು ಏಕತೆಯ ಸಂದೇಶವನ್ನು ಸಾರುವ ಹಬ್ಬವಾಗಿದ್ದು, ಇಂತಹ ಕೂಟಗಳು ಸಮುದಾಯದಲ್ಲಿ ಸ್ನೇಹವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

ಪ್ರೆಸ್ ಫೋರಂ ಅಧ್ಯಕ್ಷ ಅಬ್ದುಲ್ಲ ಕುಂಬಳೆ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕುಂಬಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸುಫ್ ಮುಖ್ಯ ಅತಿಥಿಯಾಗಿದ್ದರು.

ಉಪಾಧ್ಯಕ್ಷ ಪುರುಷೋತ್ತಮ ಭಟ್, ಸದಸ್ಯರಾದ ಅಬ್ದುಲ್ ಲತೀಫ್ ಉಳುವಾರ್, ರಶೀದ್ ಬಂದ್ಯೋಡು, ಕೆ.ಎಂ. ಸತ್ತಾರ್, ಧನರಾಜ್ ಉಪ್ಪಳ, ತಾಹಿರ್ ಉಪ್ಪಳ, ಸುಬೈರ್ ಕುಕ್ಕಾರ್, ಝೈನುದ್ದೀನ್ ಅಡ್ಕ ಹಾಗೂ ಕೋಶಾಧಿಕಾರಿ ಅಬ್ದುಲ್ ಲತೀಫ್ ಕುಂಬಳೆ ಮಾತನಾಡಿದರು.

ಪ್ರೆಸ್ ಫೋರಂ ಕಾರ್ಯದರ್ಶಿ ಐ. ಮುಹಮ್ಮದ್ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಎಂ. ಸತ್ತಾರ್ ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement