Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸ್ನೇಹಕ್ಕೆ ನಿರಾಕರಣೆ : ಮಾಡೆಲ್‌ ಹತ್ಯೆ; ಜಿಮ್ ಟ್ರೇನರ್ ಪರಾರಿ

ನವದೆಹಲಿ : ಸ್ನೇಹ ಬೆಳೆಸಲು ನಿರಾಕರಿಸಿದ್ದ ಯುವತಿಯನ್ನು ಜಿಮ್ ಟ್ರೇನರ್‌ ಮನೆಗೆ ನುಗ್ಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ದೆಹಲಿಯ ತಿಲಕ್ ನಗರದಲ್ಲಿ ನಡೆದಿದೆ. ಮೃತ ಯುವತಿಯನ್ನು  ಮಾಡೆಲ್‌ ಮುಸ್ಕಾನ್(21) ಎಂದು ಗುರುತಿಸಲಾಗಿದೆ. ಆರೋಪಿ ಇಮ್ರಾನ್ ಜಿಮ್ ಟ್ರೇನರ್‌ ಆಗಿದ್ದು, ಘಟನೆ ವೇಳೆ ಮುಸ್ಕಾನ್ ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮುಸ್ಕಾನ್ ಜಿಮ್‌ಗೆ ತೆರಳುತ್ತಿದ್ದ ವೇಳೆ ಇಮ್ರಾನ್‌ ಪರಿಚಯವಾಗಿದ್ದ. ಬಳಿಕ ಆತ ಆಕೆಯೊಂದಿಗೆ ಸ್ನೇಹ ಬೆಳೆಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಆದರೆ ಮುಸ್ಕಾನ್ ಇದಕ್ಕೆ ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.

ಮನೆಯಲ್ಲಿದ್ದ ಯುವತಿಯನ್ನು ಹತ್ಯೆಗೈದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Post a Comment

0 Comments

ಜಾಹೀರಾತು

Responsive Advertisement